ಶಕ್ತಿದೇವಿ ದೇವಸ್ಥಾನದಲ್ಲಿ ನವರಾತ್ರೋತ್ಸವ

h30-shkatidevi
Published on

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆ ಶಕ್ತಿನಗರದಲ್ಲಿರುವ ಶ್ರಿ ಶಕ್ತಿದೇವಿ ದೇವಸ್ಥಾನದಲ್ಲಿ ನಾಡಹಬ್ಬ ನವರಾತ್ರಿ ಉತ್ಸವದ ಅಂಗವಾಗಿ ಅ. 3ರಿಂದ 12ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅ.3ರಿಂದ 11ರವರೆಗೆ ಪ್ರತಿ ದಿನ ರಾತ್ರಿ 7 ಗಂಟೆಯಿಂದ ಸೀತಾಗಿರಿ ಅಣ್ಣಿಗೇರಿಯ ಡಾ. ಎ.ಸಿ. ವಾಲಿ ಮಹಾರಾಜರಿಂದ ಶ್ರೀ ಶಕ್ತಿದೇವಿ ಆರಾಧನೆ ಪ್ರವಚನ ಜರುಗಲಿದೆ. ನಿತ್ಯ ಬೆಳಗ್ಗೆ 6ಗಂಟೆಗೆ ಸುಪ್ರಭಾತ, 8ಕ್ಕೆ ಶ್ರೀಶಕ್ತಿದೇವಿಗೆ ಪಂಚಾಮೃತ ಅಭಿಷೇಕ, 11ಗಂಟೆಗೆ ಮಂಗಳಾರತಿ, ರಾತ್ರಿ 8ಕ್ಕೆ ಮಹಾಮಂಗಳಾರತಿ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಲಿವೆ.
ಇದೇ ವೇಳೆ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ‘ಶರೀಫಾಮೃತ’ ಪುಸ್ತಕ ಲೋಕಾರ್ಪಣೆಗೊಳಿಸುವರು.
ಅ. 4ರಂದು ರಾತ್ರಿ 8ಕ್ಕೆ ದಾಂಡಿಯಾ(ಗರ್ಭಾ)ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಭಾಗವಹಿಸುವವರು ಮೊ. 9916636546, 9844479000 ಸಂಪರ್ಕಿಸಬಹುದು.
12ರಂದು ವಿಜಯದಶಮಿ ಅಂಗವಾಗಿ ಬೆಳಗ್ಗೆ 7.30ಕ್ಕೆ ಶ್ರೀ ಶಕ್ತಿದೇವಿಗೆ ವಿಶೇಷ ಅಲಂಕಾರ ಪೂಜೆ, ಬೆಳಗ್ಗೆ 8 ಗಂಟೆಗೆ ಶಮಿ(ಬನ್ನಿ) ಪೂಜೆ, ಸೀಮೋಲ್ಲಂಘನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9742174176, 9448267913 ಸಂಪರ್ಕಿಸಬೇಕೆಂದು ಶ್ರೀ ಶಕ್ತಿನಗರ ನಾಗರಿಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net