ಪಂಜ ಸನ್ನಿಧಿಯಲ್ಲಿ ಸೌಂದರ್ಯ ಲಹರಿ ಪಾರಾಯಣ

panja
Published on

ಸುಬ್ರಹ್ಮಣ್ಯ: ಪಂಜ ಸೀಮೆಯ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಳದ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರುತ್ತಿದೆ.

ಪ್ರತಿದಿನ ಶ್ರೀ ದೇವರಿಗೆ ಮಧ್ಯಾಹ್ನ ಮತ್ತು ರಾತ್ರಿ ವಿವಿಧ ಅಲಂಕಾರಗಳೊಂದಿಗೆ ಮಹಾಪೂಜೆ, ಪ್ರಸಾದ ವಿತರಣೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಮತ್ತು ಅಷ್ಟಾವಧಾನ ಬೆಳಗ್ಗಿನಿಂದ ರಾತ್ರಿಯ ತನಕ ನೆರವೇರುತ್ತಿದೆ. ಇದಲ್ಲದೆ ಯಕ್ಷಗಾನ, ಭರತನಾಟ್ಯ, ಚೆಂಡೆ ವಾದನ, ಯಕ್ಷ ಭಾಗವತಿಕೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿವೆ.

ಬುಧವಾರ ಅಮ್ಮನವರ ಸನ್ನಿಧಿಯಲ್ಲಿ ಸೌಂದರ್ಯ ಲಹರಿ ಪಾರಾಯಣ ಕುಂಕುಮಾರ್ಚನೆ ನೆರವೇರಿತು. ಆಧ್ಯಾ ಬಾಬ್ಲುಬೆಟ್ಟು ಮತ್ತು ಸ್ನೇಹಾ ಪಿ.ರಾವ್ ಅವರಿಂದ ಭರತನಾಟ್ಯ ಪ್ರದರ್ಶಿತವಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸದಸ್ಯರು, ಊರವರು ಮತ್ತು ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net