ಮೈಸೂರಿನಲ್ಲಿ ನವರಾತ್ರಿ ಗೊಂಬೆ ಸ್ಪರ್ಧೆ

Navratri doll competition in Mysore
Published on

ಮೈಸೂರು: ರಾಜರ ಕಾಲದಲ್ಲಿ ಪ್ರಾರಂಭಗೊಂಡ ನವರಾತ್ರಿಯಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಇಂದಿಗೂ ಮುಂದುವರೆದು ಕೊಂಡು ಬಂದಿರುವುದು ಶ್ಲಾಘನೀಯ ಎಂದು ಕವಯತ್ರಿ ಡಾ.ಲತಾ ರಾಜಶೇಖರ್ ಹೇಳಿದರು.

ನಗರದ ಸರಸ್ವತಿಪುರಂನ ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸ್ನೇಹ ಸಿಂಚನ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಸಂಸ್ಕೃತಿ ಸಿಂಚನ ಪ್ರಶಸ್ತಿ ಪ್ರದಾನ, ಭಕ್ತಿ-ಭಾವಗೀತ ಗಾಯನ, ನವರಾತ್ರಿ ಗೊಂಬೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನವರಾತ್ರಿ ಉತ್ಸವವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ನವರಾತ್ರಿ ಸಂದರ್ಭ ದುರ್ಗಾ ಪೂಜೆ ಸಲ್ಲಿಸಲಾಗುತ್ತದೆ. ದಸರಾ ಪರಂಪರೆಗೆ ಶತಮಾನಗಳ ಇತಿಹಾಸ ಇದೆ ಎಂದರು.

ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಅನುಸೂಯ ವೇಣುಗೋಪಾಲ್, ಹೇಮಲತಾ ಕುಮಾರಸ್ವಾಮಿ, ಸುಧಾ ನಾರಾಯಣ್, ಶ್ರೀದೇವಿ ಶ್ರೀವತ್ಸ, ಗೀತ ರಘುರಾಂ ಅವರಿಗೆ ಸಂಸ್ಕೃತಿ ಸಿಂಚನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ರಘುರಾಂ ವಾಜಪೇಯಿ, ಸತ್ಸಂಗ ಪ್ರಾಚಾರಕಿ ಸುಮತಿ ಸುಬ್ರಹ್ಮಣ್ಯ, ಪ್ರಾಂಶುಪಾಲ ಸತ್ಯಪ್ರಸಾದ್, ಮೆರಿಡಿಯನ್ ಗ್ವಾಸ ಫೌಂಡೇಷನ್ ಅಧ್ಯಕ್ಷ ಡಾ.ಗುರುರಾಜ್, ಸಮಾಜ ಸೇವಕಿ ರಾಧಿಕಾ ರವಿ, ಸ್ನೇಹ ಸಿಂಚನ ಟ್ರಸ್ಟ್‌ನ ಅಧ್ಯಕ್ಷೆ ಮ.ನ.ಲತಾ ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net