

ಶಿರಸಿ: ನವರಾತ್ರಿ ಉತ್ಸವದ ಅಂಗವಾಗಿ ಮಾರಿಕಾಂಬೆ ದೇವಸ್ಥಾನದ ವತಿಯಿಂದ ಅ.15 ರಿಂದ ಅ.24 ರವರೆಗೆ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗಳು ಜರುಗಲಿದೆ ಎಂದು ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅ.15 ರಿಂದ 24 ರವರೆಗೆ ಪ್ರತಿದಿನ ಬೆಳಿಗ್ಗೆ 6ಗಂಟೆಯಿಂದ 8 ಗಂಟೆವರೆಗೆ ಮಾರಿಕಾಂಬಾ ಭಜನಾ ಮಂಡಳಿ ಹಾಗೂ ಇತರರಿಂದ ಭಜನಾ ಕಾರ್ಯಕ್ರಮ, ಬೆಳಿಗ್ಗೆ 8ಗಂಟೆಯಿಂದ ಸಪ್ತಶತಿ ಪಾರಾಯಣ, ಪಲ್ಲವ ಪಾರಾಯಣ, ಪ್ರತಿದಿನ ಸಂಜೆ 7 ರಿಂದ 9.30ವರೆಗೆ ಮಂಗಳವಾರ ಮತ್ತು ಶುಕ್ರವಾರ 7 ಗಂಟೆಯಿಂದ 10 ಗಂಟೆವರೆಗೆ ಕೀರ್ತನೆ ನಡೆಯಲಿದೆ.
ಅ.15 ಮತ್ತು 16 ರಂದು ಮಧುಸೂದನ ದಾಸ ಮಂಡ್ಯ, ಅ.17 ರಂದು ಎಸ್.ಎಸ್.ಶಿವಾನಂದ ಸ್ವಾಮಿ ಶಿವಮೊಗ್ಗ, ಅ.19 ರಂದು ಪ್ರಿಯಾಂಕಾ ಪರಮಾನಂದ ಹೆಗಡೆ ಶಿರಸಿ, ಅ.20ರಂದು ಶೈಲೇಶಕುಮಾರ ದಾಸ ಸಕಲೇಶಪುರ, ಅ.22 ರಂದು ಡಿ.ದೇವರಾಜ ಬೆಂಗಳೂರು ಅವರಿಂದ ಕೀರ್ತನೆ ನಡೆಯಲಿದೆ. ಅ.24ರ ವಿಜಯ ದಶಮಿ ದಿನದಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಹನುಮಂತ ದೇವರ ಪಲ್ಲಕ್ಕಿಯು ಸಂಜೆ ನಗರದಲ್ಲಿ ಸಂಚರಿಸುವುದು. ರಾತ್ರಿ 10 ಗಂಟೆಯ ನಂತರ ಕೋಟೆಕೆರೆಯ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ, ಪಡಿಯಾಟ ನಡೆಯುವುದು ಎಂದರು.
ನವರಾತ್ರಿ ಉತ್ಸವದ ನಿಮಿತ್ತ ಅ.15 ರಂದು ಬೆಳಿಗ್ಗೆ 9 ರಿಂದ 6 ಘಂಟೆಯವರೆಗೆ ಚದುರಂಗ ಸ್ಪರ್ಧೆ, ಬೆಳಿಗ್ಗೆ 9ರಿಂದ 12ಗಂಟೆವರೆಗೆ ರಂಗವಲ್ಲಿ ಸ್ಪರ್ಧೆ, ಮಧ್ಯಾಹ್ನ 3 ರಿಂದ 6 ಘಂಟೆವರೆಗೆ ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ.
ಅ.16 ರಂದು ಬೆಳಿಗ್ಗೆ 9ರಿಂದ 12 ಘಂಟೆ ವರೆಗೆ ಹಳ್ಳಿಯ ಹಾಡುಗಳ ಸ್ಪರ್ಧೆ, ಮಧ್ಯಾಹ್ನ 3 ಗಂಟೆಯಿಂದ 6ಗಂಟೆ ವರೆಗೆ ಭಾವಗೀತೆ ಸ್ಪರ್ಧೆ, ಅ.17 ರಂದು ಬೆಳಿಗ್ಗೆ 9ರಿಂದ 12ಘಂಟೆ ವರೆಗೆ ಧ್ಯಾನ ಮಾಲಿಕೆ, ಮಧ್ಯಾಹ್ನ 3 ರಿಂದ 6 ಘಂಟೆವರೆಗೆ ಜಾನಪದ ಗುಂಪುನೃತ್ಯ ಸ್ಪರ್ಧೆ, ಅ.18 ರಂದು ಬೆಳಿಗ್ಗೆ 9 ರಿಂದ 12 ಘಂಟೆ ವರೆಗೆ ಆರತಿ ನಾಟಿನ ಸ್ಪರ್ಧೆ, ಮಧ್ಯಾಹ್ನ 3 ಗಂಟೆಯಿಂದ 6 ಘಂಟೆವರೆಗೆ ಶಾಸ್ತಿ್ರಯ ನೃತ್ಯ, ಅ.19ರಂದು ಬೆಳಿಗ್ಗೆ 9 ರಿಂದ 12ಘಂಟೆ ವರೆಗೆ ಕರಕುಶಲ ವಸ್ತುಗಳ ಪ್ರದರ್ಶನ, ಮಧ್ಯಾಹ್ನ 3 ರಿಂದ 6 ಗಂಟೆವರೆಗೆ ಅಂಗನವಾಡಿ ನೃತ್ಯ ಸ್ಪರ್ಧೆ, ಅ.20 ರಂದು ಬೆಳಿಗ್ಗೆ 9 ರಿಂದ 12ಗಂಟೆವರೆಗೆ ಸಮೂಹ ದೇಶಭಕ್ತಿಗೀತೆಗಳ ಸ್ಪರ್ಧೆ, ಮಧ್ಯಾಹ್ನ 3ರಿಂದ 6ಗಂಟೆವರೆಗೆ ಅಂಗನವಾಡಿ ನೃತ್ಯ ಸ್ಪರ್ಧೆ, ಅ.21ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ಘಂಟೆವರೆಗೆ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ, ಮಧ್ಯಾಹ್ನ 3ರಿಂದ 6 ಘಂಟೆವರೆಗೆ ಜಾನಪದ ಹಾಡುಗಳ ಸ್ಪರ್ಧೆ, ಅ.22 ರಂದು ಬೆಳಿಗ್ಗೆ 9ರಿಂದ 12 ಗಂಟೆವರೆಗೆ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಚಿಕ್ಕಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಅ.23 ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆವರೆಗೆ ಚಿಕ್ಕಮಕ್ಕಳ ಫ್ಯಾನ್ಸಿ ಡ್ರೇಸ್ ಸ್ಪರ್ಧೆ ನಡೆಯಲಿದೆ ಎಂದರು.
ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಅ.8 ಹಾಗೂ 9 ರಂದು ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ 9.30 ರಿಂದ ಏಕಕಾಲದಲ್ಲಿ ಸ್ಪರ್ಧೆಗಳನ್ನು ಏರ್ಪಡಿಲಾಗುತ್ತದೆ. ಪ್ರಾಥಮಿಕ ಪ್ರೌಢಶಾಲೆ ಬಾಲಕ-ಬಾಲಕರಿಯರಿಗೆ ಖೋ-ಖೋ, ಕಬಡ್ಡಿ, ಪ್ರೌಢಶಾಲಾ ಬಾಲಕ-ಬಾಲಕರಿಯರಿಗೆ ವಾಲಿಬಾಲ್, 18 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಅ.9 ರಂದು ಅರಣ್ಯ ಭವನದಲ್ಲಿ ಪ್ರಾಥಮಿಕ, ಪ್ರೌಢಶಾಲಾ, ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಬ್ಯಾಡ್ಮಿಂಟನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
40 ರಿಂದ 60 ವರ್ಷದ ಪುರುಷ ಹಾಗೂ ಮಹಿಳೆಯರಿಗೆ 100, 400, 800 ಮೀಟರ್ ಓಟ, ಗುಂಡು ಎಸೆತ, ನಡಿಗೆ, ಬಾಲ್ ಎಸೆತ, ಹಿರಿಯ ನಾಗರಿಕರಿಗೆ 100 ಮೀಟರ್ ಓಟ, ಗುಂಡು ಎಸೆತ, ನಡಿಗೆ ಸ್ಪರ್ಧೆ, ಕ್ರೀಡಾಪಟುಗಳು ಸೆ.30 ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ನವರಾತ್ರಿ ಉತ್ಸವದಲ್ಲಿ ಸೆ.15 ರಂದು ಗಾಯತ್ರಿ ದೇವರಾಜ ಮಂಗಳೂರು ಇವರಿಂದ ವೀಣಾವಾದನ, ಕು.ಸುನಿ ಹೆಗಡೆ ಅವಳಿಂದ ಭರತನಾಟ್ಯ, ವಸುದೇಂದ್ರ ವೈದ್ಯ ಬೆಂಗಳೂರು ಅವರಿಂದ ದಾಸವಾಣಿ, ಅ.16 ರಂದು ತೇಜಸ್ವಿ ವಿದ್ಯಾಲಯ ಸಾಗರ ತಂಡದಿಂದ ಸುಗಮ ಸಂಗೀತ, ಚೈತನ್ಯ ನೂಪುರ ಕಲಾಕೇಂದ್ರ ಶಿಕಾರಿಪುರ ತಂಡದಿಂದ ಭರತನಾಟ್ಯ, ಅ.20 ರಂದು ಡಾ.ಸಹನಾ ಭಟ್ಟ, ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದಿಂದ ಭರತನಾಟ್ಯ, ರಾಗಮಿತ್ರ ಪ್ರತಿಷ್ಠಾನದಿಂದ ಭಕ್ತಿ ಸಂಗೀತ, ಸನ್ನಿ ಬೆಂಗಳೂರಿನಿಂದ ಭರತನಾಟ್ಯ, ಮಾರಿಕಾಂಬಾ ಕರೋಕೆ ಸ್ಟುಡಿಯೊದಿಂದ ಭಕ್ತಿಗೀತೆ, ಅ.26ರಂದು ವೀಣಾ ಭಟ್ಟ ಅವರಿಂದ ಕಥಕ್ ನೃತ್ಯ, ಸುಮಾ ಹೆಗಡೆಯಿಂದ ಗಾಯನ, ಕಲಾಭಾರತಿ ಕಲಾ ತಂಡದ ಮನೋಜ ಪಾಲೇಕರ ಅವರಿಂದ ಕಲಾ ವೈವಿಧ್ಯ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ವೀಣಾಜಿ ಅವರಿಂದ ಪ್ರವಚನ, ಸ್ಮಾಟ್ ಡ್ಯಾನ್ಸ್ ಕ್ಲಾಸ್ ನಿಂದ ಭಕ್ತಿಗೀತೆ, ಅ.28 ರಂದು ಬೆಳಿಗ್ಗೆ 11 ಘಂಟೆಯಿಂದ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನವರಾತ್ರಿ ಸಮಯದಲ್ಲಿ ಅ.15 ರಿಂದ 24 ರವರೆಗೆ ಪುಷ್ಪಾಲಂಕಾರ ಸೇವೆ ಸಲ್ಲಿಸಲು ಅವಕಾಶವಿದ್ದು, ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿ ದೇಣಿಗೆ, ಹೂವು ನೀಡಿ, ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸá-ೕರ ಹಂದ್ರಾಳ, ಶಿವಾನಂದ ಶೆಟ್ಟಿ, ಬಾಬುದಾರರು, ಅರ್ಚಕರು, ಸಿಬ್ಬಂದಿ ಇದ್ದರು.