ಪಟ್ಟಲದಮ್ಮ ದೇವಿಗೆ ನೋಟಿನ ಅಲಂಕಾರ: ಕೌಡ್ಲೆ ಗ್ರಾಮದಲ್ಲಿ ನವರಾತ್ರಿ ಸಂಭ್ರಮ

Navratri celebration at Pattadallama temple mandya
Published on

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮದ ಪಟ್ಟಲದಮ್ಮ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ದೇವಿಗೆ ನೋಟಿನ ಅಲಂಕಾರ ಮಾಡಲಾಗಿತ್ತು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯ ನಡೆಯಿತು. ಅಂತೆಯೇ 20 ರೂ, 50 ರೂ, 100 ರೂ, 200 ರೂ ಹಾಗೂ 500 ರೂ ಮುಖಬೆಲೆಯ ನೋಟಿನಿಂದ ದೇವಿಯಲ್ಲಿ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ನವೀನ್ ಶ್ರೀ ಗೋಪಾಲ್ ಅವರ ನೇತೃತ್ವದಲ್ಲಿ ದೇವಿಗೆ ಅಲಂಕಾರ, ವಿಶೇಷ ಪೂಜೆ ನಡೆಯಿತು. ಮಹಾಮಂಗಳಾರತಿ ಬಳಿಕ ಪುಳಿಯೊಗರೆ, ಮೊಸರನ್ನ, ರಸಾಯನ, ಬೂಂದಿ, ಕಡ್ಲೆ ಗುಗರಿಯನ್ನು ಪ್ರಸಾದವಾಗಿ ವಿತರಣೆ ಮಾಡಲಾಯಿತು. ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು.

ನವರಾತ್ರಿ ಅಂಗವಾಗಿ ಪಟ್ಟದಲಮ್ಮ ದೇವಿಗೆ ಅರಿಶಿನ ಕುಂಕುಮ ಅಲಂಕಾರ, ಮಯೂರ ವಾಹಿನಿ, ನಿಂಬೆಹಣ್ಣು, ಬಣ್ಣ, ತರಕಾರಿ, ಮೀನಾಕ್ಷಿ, ವೀಳ್ಯೆದೆಲೆ, ಸ್ಕಂದಮಾತೆ ಹಾಗೂ ಕೊನೆಯ ದಿನವಾದ ಮಂಗಳವಾರ ವಿಜಯದಶಮಿ ಅಂಗವಾಗಿ ವನದುರ್ಗೆ ಅಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net