ಸಂಭ್ರಮದಿಂದ ನವರಾತ್ರಿ ಆಚರಣೆ: ನೋಡುಗರ ಆಕರ್ಷಣೆಯಾದ ಗೊಂಬೆ ಪ್ರದರ್ಶನ

doll
Published on

ಬೆಂಗಳೂರು:ದಸರಾ ಹಿನ್ನೆಲೆಯಲ್ಲಿ ಬೆಳ್ಳಂದೂರು ನಿವಾಸಿ ಜೆ.ಸುದರ್ಶನ್ ಮತ್ತು ಪೃಥ್ವಿ ದಂಪತಿ ಗೊಂಬೆಗಳಿಗೆ ಪೂಜೆ ಸಲ್ಲಿಸಿ ನವರಾತ್ರಿ ಆಚರಿಸಿದರು. ಚನ್ನಪಟ್ಟಣ ಗೊಂಬೆ, ಪಟ್ಟದ ಗೊಂಬೆ, ತಮಿಳುನಾಡಿನ ಗೊಂಬೆ ಮುಂತಾದ ಗೊಂಬೆಗಳನ್ನು ಮನೆಯಲ್ಲಿ ಸಂಗ್ರಹಿಸಿ ಪೂಜಿಸುತ್ತಿದ್ದಾರೆ. ಪ್ರತಿ ಗೊಂಬೆಯು ಒಂದೊಂದು ಕಥೆಯನ್ನು ಚಿತ್ರಸಲಿದೆ.

ಮೈಸೂರು ದಸರಾ, ಚಾಮುಂಡೇಶ್ವರಿ, ಮೈಸೂರು ಮಹಾರಾಜ, ಮಹಿಷಾಸುರ, ಮಹಾವಿಷ್ಣುವಿನ ಅವತಾರ, ಅಷ್ಟಲಕ್ಷ್ಮಿ, ಅಯ್ಯಪ್ಪಸ್ವಾಮಿ, ಭೀಷ್ಮ,ಅರ್ಜುನ, ಕುಂಭಕರ್ಣ, ರಾವಣ, ಗಣೇಶ,ಕಾರ್ತಿಕೇಯ, ರಾಮ, ಆಂಜನೇಯ, ಅನಂತ ಪದ್ಮನಾಭ, ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಸೌದತ್ತಿ ರೇಣುಕಾ ಯಲ್ಲಮ್ಮಾ ದೇವಿ, ಮದುರೈ ಮೀನಾಕ್ಷಿ, ಗಾಯತ್ರಿ, ಚೌಡೇಶ್ವರಿ ದೇವಿ, ಕಾಳಿ, ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ಸೇರಿ ಇತ್ಯಾದಿ ಗೊಂಬೆಗಳು ನೋಡುಗರ ಆಕರ್ಷಣೆಯಾಗಿದೆ.

8 ವರ್ಷಗಳಿಂದ ನವರಾತ್ರಿಯನ್ನು ಆಚರಿಸುತ್ತಿದ್ದೇವೆ. ಇದು ನಮ್ಮ ಮನೆಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಬ್ಬವನ್ನು ಭಕ್ತಿ, ಭವ್ಯತೆಯಿಂದ ಆಚರಿಸುತ್ತಿದ್ದೇವೆ. ಚನ್ನಪಟ್ಟಣ ಗೊಂಬೆ, ಪಟ್ಟದ ಗೊಂಬೆ, ತಮಿಳುನಾಡಿನ ಗೊಂಬೆ ಮುಂತಾದ ವಿವಿಧ ಬಗೆಯ ಗೊಂಬೆಗಳನ್ನು ಸಂಗ್ರಹಿಸಿ 9 ದಿನಗಳ ಕಾಲ ಪ್ರದರ್ಶನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಗೊಂಬೆಗಳನ್ನು ಸೇರಿಸುವ ಆಶಯ ಹೊಂದಿದ್ದೇವೆ ಎನ್ನುತ್ತಾರೆ ಜೆ.ಸುದರ್ಶನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net