ಶ್ರೀ ಗಂಗಾಮಾತಾ ಮಂದಿರದಲ್ಲಿ ನವರಾತ್ರಿ

9 gkn 1
Published on

ಗೋಕರ್ಣ: ಶ್ರೀ ಮಹಾಬಲೇಶ್ವರ ದೇವರ ಪರಿವಾರ ದೇವತೆ ಹತ್ತಿರದ ಗಂಗಾವಳಿಯ ಶ್ರೀ ಗಂಗಾಮಾತಾ ಮಂದಿರದಲ್ಲಿ ವಾರ್ಷಿಕ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ನಿತ್ಯ ಭಕ್ತರು ಆಗಮಿಸಿ ವಿಶೇಷ ಪೂಜೆ, ಉಡಿ ಸಮರ್ಪಣೆ, ಪುಷ್ಪ ಪೂಜೆ ಮುಂತಾದ ಹರಕೆ ಸಲ್ಲಿಸುತ್ತಿದ್ದಾರೆ. ನವರಾತ್ರಿ ನಿಮಿತ್ತ ಆಗಮಿಸುವ ಭಕ್ತರಿಗೆ ಮಂದಿರದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅ. 12ರಂದು ವಿಜಯ ದಶಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ. ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಆರ್. ಅಂಬಿಗ ಮತ್ತು ಸರ್ವ ಸದಸ್ಯರು, 18 ಹಳ್ಳಿ ಅಂಬಿಗ ಸಮಾಜದ ಯಜಮಾನರು ಮತ್ತು ಸಮಾಜ ಬಾಂಧವರ ಸರ್ವ ಸಹಕಾರದಲ್ಲಿ ನವರಾತ್ರಿ ಉತ್ಸವವನ್ನು ಸಾಂಗವಾಗಿ ನೆರವೇರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net