

ಅಕ್ಟೋಬರ್ 7ರಿಂದ ನವರಾತ್ರಿ ಶುರುವಾಗಲಿದೆ. ನಾಡಹಬ್ಬದ ಈ ಸಂದರ್ಭದಲ್ಲಿ ಮಹಿಳೆಯರ ಸೀರೆ ಸಂಭ್ರಮವನ್ನು ಹೆಚ್ಚಿಸುವುದಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ನಿಮ್ಮ ನೆಚ್ಚಿನ ವಿಜಯವಾಣಿ ದಿನಪತ್ರಿಕೆ ನವೋಲ್ಲಾಸ ಚಿತ್ರ ಸಂಪುಟವನ್ನು ಪ್ರಾರಂಭಿಸಿದೆ.
"ದಿನಕ್ಕೊಂದು ವರ್ಣ ಭಕ್ತಿಭಾವದ ಅನಾವರಣ" ಎಂಬ ಪರಿಕಲ್ಪನೆಯೊಂದಿಗೆ ಅ.7 ರಿಂದ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ನವರಾತ್ರಿ ವಿಶೇಷವಾಗಿ ನವಬಣ್ಣದ ಸೀರೆಯುಟ್ಟ ಫೋಟೋ ತೆಗೆದು ಕಳುಹಿಸಿದರೆ, ಪ್ರತೀ ದಿನ ವಿಜಯವಾಣಿಯಲ್ಲಿ ನಿಮ್ಮ ಫೋಟೋ ನೋಡಿ ಸಂಭ್ರಮಿಸಬಹುದಾಗಿದೆ.
ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆಯುನ್ನುಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್ಆ್ಯಪ್ ನಂಬರ್ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೊಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.