ವಿಜಯವಾಣಿ ನವೋಲ್ಲಾಸ ನಾರಿಯರ ಸೀರೆ ಸಂಭ್ರಮ,  ಫೋಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

IMG-20241025-WA0008-1.jpg
Published on

ಹುಬ್ಬಳ್ಳಿ: ಸೀರೆ ಎಂದರೆ ಭಾರತೀಯ ನಾರಿಯರಿಗೆ ಎಲ್ಲಿಲ್ಲದ ಸಂಭ್ರಮ. ಹಬ್ಬ, ಉತ್ಸವ ಏನೇ ಇರಲಿ ಸೀರೆ ಬೇಕೇ ಬೇಕು. ಅದರಲ್ಲೂ ದಸರಾ, ದೀಪಾವಳಿ ಸಂದರ್ಭದಲ್ಲಿ ಶ್ರೀದೇವಿಗೆ ಸೀರೆ ಉಡಿಸಿ, ತಾವೂ ವಿಧವಿಧ ಬಣ್ಣದ ಸೀರೆ ಉಟ್ಟು ಸಂಭ್ರಮಿಸುವುದು ಎಲ್ಲೆಡೆ ಕಂಡು ಬರುತ್ತದೆ. ಇಂತಹ ಸಂಪ್ರದಾಯ, ಸಂಸ್ಕೃತಿಗೆ ಪೂರಕವಾಗಿ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ನವರಾತ್ರಿ ನವೋಲ್ಲಾಸ ಕಾರ್ಯಕ್ರಮಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.

"ನವರಾತ್ರಿ ನವೋಲ್ಲಾಸ' ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ ಎಂಬ ಫೋಟೋ ಸ್ಪರ್ಧೆಗೆ ನಿತ್ಯವೂ ಸಾವಿರಾರು ಮಹಿಳೆಯರು ಸೀರೆಯುಟ್ಟ ಫೋಟೋಗಳನ್ನು ವಿಜಯವಾಣಿಗೆ ಕಳುಹಿಸಿದ್ದರು. ಅವುಗಳಲ್ಲಿ ಆಯ್ಕೆಯಾದವರಿಗೆ ಬಹುಮಾನ ವಿತರಣೆ ಅದ್ದೂರಿ ಸಮಾರಂಭ ಶುಕ್ರವಾರ ಇಲ್ಲಿಯ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋರ್ಟಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ ನಿತ್ಯವೂ ಸಾವಿರಾರು ಫೋಟೋಗಳನ್ನು ಮಹಿಳೆಯರು ಕಳುಹಿಸಿದ್ದರು. ನವೋಲ್ಲಾಸ ಸೀರೆಯ ಸೊಬಗು ಮಹಿಳೆಯರ ದಸರಾ ಸಂಭ್ರಮವನ್ನು ದ್ವಿಗುಣಗೊಳಿಸಿತ್ತು. ಅಲ್ಲದೆ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ದಿನದಿನವೂ ಉತ್ಸಾಹದಿಂದ ಸೀರೆ ಉಟ್ಟು ಕಂಗೊಳಿಸಲು ಪ್ರೇರಣೆ ನೀಡಿತ್ತು. ಅಂತಹ ಉತ್ಸಾಹದಿಂದ ಪಾಲ್ಗೊಂಡ ಮಹಿಳೆಯರ ಪೈಕಿ 81 ಜನರಿಗೆ ಸೀರೆ ಬಹುಮಾನವಾಗಿ ನೀಡಲಾಯಿತು.

ಒಂಬತ್ತು ದಿನಗಳ ಕಾಲ ನವೋಲ್ಲಾಸ ಸೀರೆ ಫೋಟೋ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ನಿತ್ಯ ಅತ್ಯುತ್ತಮ ಮೂರು ಸಿಂಗಲ್ ಫೋಟೋಗಳಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಹಾಗೂ ಕನಿಷ್ಠ 6 ಮಹಿಳೆಯರಿದ್ದ ಅತ್ಯುತ್ತಮ ಗ್ರೂಪ್ ಫೋಟೋಗಳಿಗೆ ಪ್ರತಿಯೊಂದಕ್ಕೂ ಆರು ಸೀರೆಗಳಂತೆ ಎಲ್ಲರಿಗೂ ಸೀರೆ ವಿತರಣೆ ಮಾಡಲಾಯಿತು.

ಶಕ್ತಿಯ ಸ್ವರೂಪ ಸ್ತ್ರೀ:
ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ವಿಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು, ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿನಂತೆ ಸ್ತ್ರೀಯರು ಶಕ್ತಿಯ ಸಂಕೇತವಾಗಿದ್ದಾರೆ. ನವೋಲ್ಲಾಸ ಸೀರೆ ಫೋಟೋ ಸ್ಪರ್ಧೆಯಲ್ಲಿಯೂ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಹುಮ್ಮಸ್ಸು ಪ್ರದಶಿರ್ಸಿದ್ದಾರೆ. ನಿತ್ಯ ನಾಲ್ಕು, ಐದು ಸಾವಿರ ಫೋಟೋಗಳು ಪತ್ರಿಕೆಗೆ ಬಂದಿವೆ. ಇದೇ ರೀತಿ ವಿಜಯವಾಣಿಯ ಎಲ್ಲ ಹತ್ತು ಆವೃತ್ತಿಗಳಲ್ಲಿ ಇಂತಹ ಸ್ಪರ್ಧೆ ನಡೆಸಲಾಗಿದೆ. ದೊಡ್ಡ ಮಟ್ಟದಲ್ಲಿ ಸ್ಪರ್ಧೆಗೆ ಪ್ರೋತ್ಸಾಹ ನೀಡಿದ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು.

ತಂತ್ರಜ್ಞಾನ ಎಷ್ಟೇ ಬದಲಾದರೂ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗಿಲ್ಲ. ಇದಕ್ಕೆ ಪೂರಕವಾಗಿ ವಿಜಯವಾಣಿ ಕೂಡ ಸುದ್ದಿ ಕೊಡುವ ಜತೆಗೆ ಸಾಮಾಜಿಕ ಸೇವೆ, ಭಾರತೀಯ ಹಬ್ಬ, ಉತ್ಸವಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಮಹಿಳೆಯರು, ಮಕ್ಕಳು, ಎಲ್ಲರಿಗೂ ಪ್ರೇರಣೆ ನೀಡುತ್ತ ಬಂದಿದೆ. "ನಾರಿ ನಿನಗೊಂದು ಸ್ಯಾರಿ' ಕಾರ್ಯಕ್ರಮವನ್ನು ಪುನಃ ಆರಂಭ ಮಾಡಲು ಮಹಿಳೆಯರು ಪ್ರೇರಣೆ ನೀಡಿದ್ದಾರೆ ಎಂದರು.

ವಿಜಯವಾಣಿ ವರ್ಷವಿಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜನರ ಮಧ್ಯೆ ಇರುತ್ತದೆ. ಓದುಗರ ಸಮೀಕ್ಷೆಯಲ್ಲಿಯೂ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಹೇಳಿದರು.

ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ಒಂಬತ್ತು ದಿನ ನಿತ್ಯವೂ ಒಂದೊಂದು ಬಣ್ಣದ ಸೀರೆ ಉಟ್ಟು ಸಂಭ್ರಮಿಸಲು ಹಾಗೂ ಅವರ ಫೋಟೋ ಪ್ರಕಟಿಸಲು ವಿಜಯವಾಣಿ ವೇದಿಕೆ ಒದಗಿಸಿತ್ತು. ಇದಕ್ಕೆ ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ ಪ್ರಾಯೋಜಕತ್ವ ವಹಿಸಿ ಪ್ರೇರಣೆ ನೀಡಿರುವುದು ಶ್ಲಾಘನೀಯ ಎಂದರು.

ವಿಆರ್ ಎಲ್ ಸಂಸ್ಥೆಯು ಇಂದು ಎಲ್ಲ ರಂಗದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ದಿಸೆಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸೀರೆಯನ್ನು ನೀಡುವ ಮೂಲಕ ಮಹಿಳೆಯರಿಗೆ ವಿಶೇಷ ಕೊಡುಗೆಯನ್ನೇ ಕೊಟ್ಟಿದೆ ಎಂದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ  ಎಂಡಿ ವೀರೇಶ ಉಂಡಿ ಮಾತನಾಡಿ, ನವರಾತ್ರಿ ಅಂಗವಾಗಿ ವಿಜಯವಾಣಿ ಹಾಗೂ ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ ವತಿಯಿಂದ ಏರ್ಪಡಿಸಿದ್ದ ನವೋಲ್ಲಾಸ ಸೀರೆ ಫೋಟೋ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂತಹ ಕಾರ್ಯಕ್ರಮ ಪ್ರಾಯೋಜಿಸಲು ಅನುವು ಮಾಡಿಕೊಟ್ಟ ವಿಜಯವಾಣಿಗೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಹಬ್ಬದ ಸಂಭ್ರಮ ಇಮ್ಮಡಿ ಮಾಡುವ ಸೀರೆಯನ್ನು ಮಹಿಳೆಯರಿಗೆ ನೀಡಿರುವುದು ಅತ್ಯುತ್ತಮ ಕಾರ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net