ನವೋದಯ ಶಾಲೆ ಮಕ್ಕಳು ಅಸ್ವಸ್ಥ

HYR JNV 27
Published on

ಹಿರಿಯೂರು: ತಾಲೂಕಿನ ಉಡುವಳ್ಳಿ ಜವಾಹರ್ ನವೋದಯ ವಸತಿ ಶಾಲೆಯ 8 ವಿದ್ಯಾರ್ಥಿಗಳು ಬೆಳಗಿನ ಉಪಾಹಾರ ಸೇವಿಸಿ ಅಸ್ವಸ್ಥರಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ವಸತಿ ಶಾಲೆಯಲ್ಲಿ ಇಡ್ಲಿ, ಚಟ್ನಿ, ಸಾಂಬರ್ ಸೇವಿಸಿದ ಬಳಿಕ 8 ವಿದ್ಯಾರ್ಥಿಗಳಿಗೆ ವಾಂತಿಯಾಗಿದೆ, ತಕ್ಷಣ ಹಿರಿಯೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದ್ದು, ಮಕ್ಕಳ ತಜ್ಞ ಡಾ. ರಂಗೇಗೌಡ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ.

ದೂರು ದಾಖಲು: ಕೇವಲ 8 ವಿದ್ಯಾರ್ಥಿಗಳು ಮಾತ್ರ ಅಸ್ವಸ್ಥರಾಗಿರುವುದು ಅನುಮಾನಾಸ್ಪದವಾಗಿದೆ. ಈ ಸಂಬಂಧ ಶಿಕ್ಷಕರೊಬ್ಬರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net