ನವಣೆ ಸೇವನೆಯಿಂದ ಆರೋಗ್ಯ ವೃದ್ಧಿ

30LNG04
ಲಿಂಗಸುಗೂರು ತಾಲೂಕಿನ ಆನೆಹೊಸೂರು ರೈತ ಅಯ್ಯನಗೌಡ ಜಮೀನಿನಲ್ಲಿ ನವಣಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು. ವಿಶ್ರಾಂತ ಕುಲಪತಿ ಡಾ.ಎಸ್.ಕೆ.ಮೇಟಿ, ಕೇಂದ್ರದ ವಿಷಯ ತಜ್ಞ ರೇಣುಕಾ ಬಿರಾದಾರ, ಸಿಬ್ಬಂದಿ ಅರವಿಂದ, ಗುರುನಾಥ, ಶರಣಬಸವ, ಸಂಜೀವಿನಿ ಒಕ್ಕೂಟದ ಮಲ್ಲಪ್ಪ, ಯಮನಮ್ಮ ಇತರರಿದ್ದರು.
Published on

ಲಿಂಗಸುಗೂರು: ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಪೂರಕವಾಗಿದ್ದು, ಇದರ ಸಂಸ್ಕರಣ ಘಟಕ ಸ್ಥಾಪನೆಗೆ ನವಣೆ ಉಪಯುಕ್ತವಾಗಿದೆ ಎಂದು ಕೃಷಿ ವಿಜ್ಞಾನ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ ಹೇಳಿದರು.

ತಾಲೂಕಿನ ಆನೆಹೊಸೂರು ರೈತ ಅಯ್ಯನಗೌಡ ಜಮೀನಿನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಹಮ್ಮಿಕೊಂಡಿದ್ದ ನವಣೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ನವಣೆ ಬೆಳೆ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾಗಿದ್ದು, ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತಾದೆ. ರೈತರು ಉತ್ಪಾದಕ ಸಂಘದಡಿ ಸಿರಿಧಾನ್ಯ ಸಂಸ್ಕರಣ ಘಟಕ ಸ್ಥಾಪಿಸಿಕೊಂಡು ಸ್ಥಳೀಯವಾಗಿ ಮಾರಾಟ ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಮಾತನಾಡಿ, ಆರೋಗ್ಯದ ಹಿತದೃಷ್ಟಿಯಿಂದ ಸಿರಿಧಾನ್ಯಗಳ ಬೇಡಿಕೆ ಹೆಚ್ಚುತ್ತಿದ್ದು, ರೈತರು ಕೂಡ ಇದನ್ನೆ ಬೆಳೆಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಸಿರಿಧಾನ್ಯಗಳಲ್ಲಿ ಅಗ್ರಸ್ಥಾನ ಪಡೆದ ನವಣೆ ಅನಾದಿ ಕಾಲದಿಂದ ಬಳಕೆಯಲ್ಲಿ ಇದೆ. ರೈತರಿಗೆ ನವಣೆ ಧಾನ್ಯ ಬಿತ್ತನೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಶ್ರಾಂತ ಕುಲಪತಿ ಡಾ.ಎಸ್.ಕೆ.ಮೇಟಿ, ಕೇಂದ್ರದ ವಿಷಯ ತಜ್ಞ ರೇಣುಕಾ ಬಿರಾದಾರ, ಸಿಬ್ಬಂದಿ ಅರವಿಂದ, ಗುರುನಾಥ, ಶರಣಬಸವ, ಸಂಜೀವಿನಿ ಒಕ್ಕೂಟದ ಮಲ್ಲಪ್ಪ, ಯಮನಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net