

ಬಾಗೂರು (ನುಗ್ಗೇಹಳ್ಳಿ ): ಹೋಬಳಿಯ ನವಿಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನವಿಲೆ ಹೊಸೂರು ಗ್ರಾಮದ ಜ್ಯೋತಿ ಬಸವರಾಜ್ ಅವಿರೋಧವಾಗಿ ಆಯ್ಕೆಯಾದರು.
ಕೆ.ಆರ್.ಸುಜಾತಾ ಬಸವರಾಜ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಜ್ಯೋತಿ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಹರೀಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷೆ ಜ್ಯೋತಿ ಮಾತನಾಡಿ, ನವಿಲೆ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ನವಿಲೆ ನಾಗೇಶ್ವರಸ್ವಾಮಿ ದೇವಾಲಯವಿದ್ದು, ನಿತ್ಯ ಬರುವ ಭಕ್ತರ ಅನುಕೂಲಕ್ಕಾಗಿ ರಸ್ತೆ, ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎನ್.ಬಿ.ನಾಗರಾಜ್, ಪಿಡಿಒ ದೇವರಾಜ್, ಗ್ರಾಪಂ ಸದಸ್ಯರಾದ ರಂಗೇಗೌಡ, ಪ್ರೇಮಲತಾ ದಿನೇಶ್, ಸಂಗೀತಾ ನಾಗೇಂದ್ರ, ಎನ್.ಬಿ. ಸೋಮಶೇಖರ್, ರಾಜಲಕ್ಷ್ಮೀ ನಾಗರಾಜ್, ಎನ್.ಸಿ.ರವೀಶ್, ಪವಿತ್ರಾ ಪರಮೇಶ್, ನಂಜುಂಡಸ್ವಾಮಿ, ಮುಖಂಡರಾದ ಅಣತಿ ಆನಂದ್, ಒಳಗೇರಹಳ್ಳಿ ಮಂಜಣ್ಣ, ಎನ್.ಕೆ.ನಾಗಪ್ಪ, ನವಿಲೇ ಹೊಸೂರು ಬಸವರಾಜ್, ಜಯದೇವಪ್ಪ ಇತರರು ಹಾಜರಿದ್ದರು.