

ಮಡಿಕೇರಿ: ಲಯನ್ಸ್ ಜಿಲ್ಲೆ ೩೧೭-ಡಿ ಇದರ ೧೪ ಕ್ಲಬ್‌ಗಳು ಕಾರ್ಯ ನಿರ್ವಹಿಸುವ ಪ್ರಾಂತೀಯ ೮ರ ಅಧ್ಯಕ್ಷರಾಗಿ ನವೀನ್ ಅಂಬೆಕಲ್ಲು ನೇಮಕಗೊಂಡಿದ್ದಾರೆ.
ಮಡಿಕೇರಿ ಲಯನ್ಸ್ ಸಂಸ್ಥೆಯ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಇವರು ೨೦೦೬-೦೭ ರಲ್ಲಿ ಲಯನ್ಸ್ ಅಧ್ಯಕ್ಷರಾಗಿದ್ದರಲ್ಲದೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ ೨೦೨೩-೨೪ರ ಅವಧಿಗೆ ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೇ ಜು.೧ ರಿಂದ ೨೦೨೪ ಜೂನ್ ಅಂತ್ಯದವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಾಂತೀಯ ರಾಯಭಾರಿಯಾಗಿ ಧನು ಉತ್ತಯ್ಯ, ವಲಯಾಧ್ಯಕ್ಷರುಗಳಾಗಿ ಸಿ.ಕೆ.ರೋಹಿತ್, ಕಾನೆಹಿತ್ಲು ಸತೀಶ್ ಕುಮಾರ್, ಎಂ.ಎ.ಬಾಲಕೃಷ್ಣ ಹಾಗೂ ವಿಶಾಲ್ ದೇವಯ್ಯ ನೇಮಕಗೊಂಡಿದ್ದಾರೆ.