ದೈವಗಳ ಪ್ರತಿಷ್ಠಾಪನಾ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ

mahostava
ಅಶೋಕನಗರ ಶ್ರೀ ಅಯ್ಯಪ್ಪ ಸ್ವಾಮಿ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಬುಧವಾರ ನಡೆಯಿತು.
Published on

ಕಾಸರಗೋಡು: ಅಶೋಕನಗರ ಶ್ರೀ ಅಯ್ಯಪ್ಪ ಸ್ವಾಮಿ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠಾಪನೆ ಹಾಗೂ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರೀ, ನಾಗ, ಗುಳಿಗ ದೈವಗಳ ಪ್ರತಿಷ್ಠಾಪನಾ ಮಹೋತ್ಸವ ಬುಧವಾರ ಆರಂಭಗೊಂಡಿತು. ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ಬಂಬ್ರಾಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಮಂದಿರದವರೆಗೆ ನಡೆಯಿತು. ತಂತ್ರಿವರ್ಯರಿಗೆ ಸ್ವಾಗತ, ವಿವಿಧ ವೈದಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ತಿರುವಾದಿರ, ನೃತ್ಯ ವೈವಿಧ್ಯ ನಡೆಯಿತು. 9ರಂದು ಬೆಳಗ್ಗೆ ಭಜನೆ, ಯೋಗ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.

10ರಂದು ಬೆಳಗ್ಗೆ 6.25ರಿಂದ 8.23ರ ಮಧ್ಯೆ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರೀ, ನಾಗ, ಗುಳಿಗ ದೈವಗಳ ಪ್ರತಿಷ್ಠಾಪನೆ, ಶ್ರೀ ಅಯ್ಯಪ್ಪ ಸ್ವಾಮಿ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠಾಪನೆ ನಡೆಯುವುದು. 10ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅರಳೀ ವೃಕ್ಷಕ್ಕೆ ವಿಷ್ಣು ಪೂಜೆ ನಡೆಯುವುದು. ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯುವುದು. ಬ್ರಹ್ಮಶ್ರೀ ವಿಷ್ಣು ಆಸ್ರ ಉಳಿಯ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ನಾಗೇಂದ್ರ ಭಟ್ ಧಾರ್ಮಿಕ ಭಾಷಣ ಮಾಡುವರು. ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ ಬಂಬ್ರಾಣ ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net