ಜ್ಯೋತಿರ್ವನದಲ್ಲಿ ನವಧಾನ್ಯ ಹವನ

Navadhanya Havana Performed in ummachagi Jyotirvana.
Published on

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ನವಧಾನ್ಯ ಹವನ ಹಾಗೂ ನವಧಾನ್ಯ ಬಿತ್ತನೆ ಕಾರ್ಯಕ್ರಮ ನಡೆಯಿತು.

ಪ್ರಕೃತಿ ಸಂರಕ್ಷಣೆ ಮತ್ತು ಪ್ರಕೃತಿ ಸಮತೋಲನದ ಸಂಕಲ್ಪದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ನವಧಾನ್ಯಗಳನ್ನು ಪೂಜಿಸಿ, ಮೊಳಕೆ ಬರಿಸಿ, ನವಗ್ರಹ ಹವನದ ಪ್ರಸಾದದೊಂದಿಗೆ ಸೇರಿಸಿ, ಮಂತ್ರ ಪೂರ್ವಕವಾಗಿ ಆಯಾ ದಿಕ್ಕಿಗೆ ಸರಿಯಾಗಿ ವಿಶಾಲವಾದ ಸ್ಥಳದಲ್ಲಿ ಬಿತ್ತನೆ ಮಾಡಲಾಯಿತು.

ಸುತ್ತಮುತ್ತಲಿನ ಪ್ರಕೃತಿ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಾ.ಕೆ.ಸಿ.ನಾಗೇಶ ಭಟ್ಟ ಅವರ ಮಾರ್ಗದರ್ಶನದಲ್ಲಿ ಅವರವರ ನಕ್ಷತ್ರ ಧಾನ್ಯವನ್ನು ಬಿತ್ತಿದರು.

ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ ಭಾಗವಹಿಸಿ ಧಾನ್ಯ ಬಿತ್ತನೆ ಮಾಡಿದರು. ನಂತರ ಮಾತನಾಡಿದ ಅವರು, ಜ್ಯೋತಿರ್ವನದ ಮೂಲಕ ಲೋಕ ಕಲ್ಯಾಣಾರ್ಥವಾಗಿ ವಿಶಿಷ್ಟ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಬಗೆಗೆ ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net