ಇಂಡಿಯಲ್ಲಿ ಚೈತನ್ಯ ನವದೇವಿಯರ ರೂಪಕ

Navdevi, Rupaka, Ind., Prajapita Brahmakumari Eshwariya University, Navaratri,
ಇಂಡಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನವರಾತ್ರಿಯ ಅಂಗವಾಗಿ ಚೈತನ್ಯ ನವದೇವಿಯರ ರೂಪಕ ಮಾಡಲಾಯಿತು. ಬಿ.ಕೆ. ಯಮುನಾ ಅಕ್ಕನವರು, ಉಮಾ ಪಟ್ಟದಕಲ್ಲ, ಜಯಶ್ರೀ ಪತ್ತಾರ ಇತರರಿದ್ದರು.
Published on

ಇಂಡಿ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನವರಾತ್ರಿ ಅಂಗವಾಗಿ ಶುಕ್ರವಾರ ಚೈತನ್ಯ ನವದೇವಿಯರ ರೂಪಕ ಮಾಡಲಾಯಿತು.

ಬಿ.ಕೆ. ಯಮುನಾ ಅಕ್ಕನವರು ಮಾತನಾಡಿ, ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರಿ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ ಆಗ ದೇವಿಯು ಧರ್ಮ ಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎಂದರು.

ನವರಾತ್ರಿಯ ಒಂಬತ್ತು ದಿನವೂ ಸತತವಾಗಿ ದೀಪ ಉರಿಸುತ್ತ, ದೇವಿಯ ಮಹಾತ್ಮೆಯ ಕುರಿತು ಪಠಣ ಮಾಡುತ್ತ ದೇವಿಯನ್ನು ಸ್ಮರಿಸಿದರೆ ನಮ್ಮಲ್ಲಿನ ದುಷ್ಟ ಶಕ್ತಿಗಳು ಸಂಪೂರ್ಣ ನಿವಾರಣೆಯಾಗುತ್ತವೆ ಎಂದರು.

ಉಮಾ ಪಟ್ಟದಕಲ್ಲ, ಜಯಶ್ರೀ ಪತ್ತಾರ ನವದೇವಿಯರನ್ನು ಸ್ವಾಗತಿಸಿದರು. ಬಸಮ್ಮ ಪೊಲೀಸ್‌ಪಾಟೀಲ, ವಿದ್ಯಾಶ್ರೀ ಪಾಟೀಲ, ದ್ರಾಕ್ಷಾಯಿಣಿ ಮೈದರಗಿ, ಸುಪ್ರಿಯಾ ರೋಡಗಿ, ಜಗದೇವಿ ತಾಂಬೆ, ಶಾಮಲಾ ಬಗಲಿ, ರೂಪಾ ಕಾಪಸೆ, ರತ್ನಕಲಾ ಪೋದ್ದಾರ, ಅರವಿಂದ ಕಠಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net