

ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ.26ರಿಂದ ಅ.10ರವರೆಗೆ ನಡೆಯಲಿದೆ. ನವರಾತ್ರಿ ಸಂದರ್ಭದ 10 ದಿನಗಳಲ್ಲಿ ದುರ್ಗಾದೇವಿ,ಆರ್ಯದೇವಿ, ಭಗವತಿ,ಕುಮಾರಿ,ಅಂಬಿಕೆ,ಮಹಿಷಮರ್ದಿನಿ, ಚಂಡಿಕೆ,ಸರಸ್ವತಿ ವಾಗೀಶ್ವರಿ, ಮಂಗಳಾದೇವಿಯ ವಿಶೇಷ ಅಲಂಕಾರ ನಡೆಯಲಿದೆ. ನವರಾತ್ರಿ ಉತ್ಸವದ ಅಂಗವಾಗಿ ಪ್ರತೀ ದಿನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
*ಸುವರ್ಣ ಪಾದುಕೆ ಸಮರ್ಪಣೆ
ಸೆ..26ರಂದು ಬೆಳಗ್ಗೆ 9.30ಕ್ಕೆ ಶ್ರೀ ಮಂಗಳಾದೇವಿಗೆ ಸುವರ್ಣ ಪಾದುಕೆ ಮತ್ತು ಬಲಿಮೂರ್ತಿಯ ಪುಷ್ಪಕನ್ನಡಿಗೆ ಚಿನ್ನದ ಹೊದಿಕೆ (ಒಟ್ಟು 2ಕೆ.ಜಿ .ತೂಕ ಹಾಗೂ 1.25 ಕೋಟಿರೂ.ವೆಚ್ಚ) ಸಮರ್ಪಣೆಯಾಗಲಿದೆ.