

ಹುಬ್ಬಳ್ಳಿ: ಅರವಿಂದನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ಭಾನುವಾರ ಘಟಸ್ಥಾಪನೆ ಮಾಡಲಾಯಿತು.
ಮಾತೋಶ್ರೀ ಅಮ್ಮನವರು ಘಟಸ್ಥಾಪನೆ ಮಾಡಿದರು. ನವವಿಧ ಸ್ನಾನಗಳು, ಮಹಾಭಿಷೇಕ ಗೈದು ವಿಶೇಷವಾಗಿ ಅಲಂಕರಿಸಲಾಗಿತ್ತು. ಸುಮಂಗಲೆಯರು ಶ್ರೀ ಲಿಲತ ಸಹಸ್ರ ನಾಮಾವಳಿ ಸ್ತೋತ್ರ ಪಠಣ ಮಾಡಿದರು.
ಬಿಜೆಪಿ ಮುಖಂಡ ತೋಟಪ್ಪ ನಿಡಗುಂದಿ, ಕಾಂಗ್ರೆಸ್ ಮುಖಂಡ ಮಹೇಶ ದಾಬಡೆ, ಶ್ರೀಧರ ಕನಮಕಲ್, ಪ್ರಕಾಶ ಅರಗಂಜಿ, ಪರಶುರಾಮ ಸುಳ್ಳದ, ವಿಠ್ಠಲ ಏಕಬೋಟೆ, ಶರದ ನಿಡಗುಂದಿ, ಯಲ್ಲಪ್ಪ ಕೋಸಗಿ, ರಾಜು ತಾಂಬೆ, ಲಕ್ಷ್ಮಣ ಭೋಜಗಾರ, ವೆಂಕಟೇಶ ರತನ, ಕಾಶಿ ಕಟ್ಟಿ, ನರಸಿಂಹ ಭೋಜಗಾರ, ಶಾರದಮ್ಮ ಕಸ್ತೂರಿ, ಆಶಾ ರಜಪೂತ, ಲೀಲಾವತಿ ಪೋಸಾ, ಇತರರು ಇದ್ದರು. ಗುರು ಬನ್ನಿಕೊಪ್ಪ ವಂದಿಸಿದರು.
ಅ. 23ರವರೆಗೆ ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನೀಡುವರು. 22ರಂದು ನವದುರ್ಗಿ ಬಾಲಕನ್ಯೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶ್ರೀ ದುರ್ಗಾಹೋಮ ನೆರವೇರುವುದು. 24ರಂದು ವಿಜಯದಶಮಿ ಅಂಗವಾಗಿ ಪಲ್ಲಕ್ಕಿ ಉತ್ಸವ ಮೂಲಕ ಬನ್ನಿಮುಡಿಯುವ ಕಾರ್ಯಕ್ರಮದೊಂದಿಗೆ ಸಮಾರೋಪಗೊಳ್ಳಲಿದೆ.