ನವನಗರದಲ್ಲಿ ಸಾಮರಸ್ಯಕ್ಕಾಗಿ ಸಂತರ ನಡಿಗೆ

IMG-20240905-WA0022_2.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದ ಗಣೇಶೋತ್ಸವ ಮಂಡಳಿ ವತಿಯಿಂದ ಮೂಲ ಗಣಪತಿಯ 45ನೇ ವರ್ಷಧ ಸಂಭ್ರಮಾಚರಣೆ ಅಂಗವಾಗಿ ಸೆ. 8ರಂದು ಸಾಮರಸ್ಯಕ್ಕಾಗಿ ಸಂತರ ನಡಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿದೆ.

ಭಾನುವಾರ ಸಂಜೆ 6ಕ್ಕೆ ನವನಗರದ ಶ್ರೀ ಬಸವೇಶ್ವರ ಸರ್ಕಲ್ ನಿಂದ ನಡಿಗೆ ಆರಂಭವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದ ವರೆಗೆ ನಡೆಯಲಿದೆ. ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಉತ್ಸವದ ಅಂಗವಾಗಿ ಏಳು ದಿನ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಂಡಳಿ ಅಧ್ಯಕ್ಷ ಸಚಿನ್ ಪಾಟೀಲ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net