ಶಂಕರರ ತತ್ವಗಳು ಇಂದಿಗೂ ಪ್ರಸ್ತುತ,  ಸಾಹಿತಿ ವೀಣಾ ಇನಾಮದಾರ ಅಭಿಮತ

IMG-20250507-WA0010.jpg
Published on

ಹುಬ್ಬಳ್ಳಿ: ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ಅಲ್ಲದ್ದನ್ನು ಬಯಸದೇ ಇದ್ದದ್ದನ್ನು ಮೆಚ್ಚಬೇಕು. ಮನಸ್ಸು ನಾಲಿಗೆ ನಡತೆಯ ಮೇಲೆ ನಿಯಂತ್ರಣ ಸಾಧಿಸಿ ಧೈರ್ಯದಿಂದ ಬಾಳು ಸಾಗಿಸಬೇಕು. ಶ್ರೀ ಶಂಕರರು ರಚಿಸಿದ ಸ್ತೋತ್ರಗಳು ಸಾರ್ವಕಾಲಿಕ ಸತ್ಯ ಎಂದು ಧಾರವಾಡದ ಸಾಹಿತಿ ವೀಣಾ ಇನಾಮದಾರ ಹೇಳಿದರು.

ಇಲ್ಲಿಯ ನವನಗರದ ಶಿವರಾತ್ರಿ ಜಾಗರಣೋತ್ಸವ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ಶಂಕರರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಆರ್.ಎಸ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಂಕರರ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು. ಗಿರೀಜಾ ಭಜನಾ ಮಂಡಳಿಯಿಂದ ಭಜನೆ, ದಾನಿಗಳಿಗೆ ಸನ್ಮಾನ ಮಾಡಲಾಯಿತು.

ಹನುಮಂತ ಭಟ್ ಉಪಾಧ್ಯೆ, ಶಂಕರಭಟ್ಟ ಜೋಶಿ, ವಸಂತ ಹರ್ಲಾಪುರ, ಸಂಜೀವ ಭಟ್ ಜೋಶಿ, ನಾಡಿಗೇರ ಸಹೋದರರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಎಂ.ಕೆ. ನಾಡಗೀರ ಪ್ರಾಸ್ತಾವಿಕ ಮಾತನಾಡಿದರು. ದಿಗಂಬರ ಜೋಶಿ ಸ್ವಾಗತಿಸಿದರು. ರಾಜಪುರೋಹಿತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net