

ಹುಬ್ಬಳ್ಳಿ: ಇಲ್ಲಿಯ ನವನಗರ ಗಂಗಾಧರನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಶಾರದೀಯ ನವರಾತ್ರಿ ಮಹೋತ್ಸವವನ್ನು ಸೆ. 22ರಿಂದ ಅಕ್ಟೋಬರ್ 2ರ ವರೆಗೆ ಆಯೋಜಿಸಲಾಗಿದೆ.
ಸೆ. 22ರಂದು ಸಂಜೆ 5.30ಕ್ಕೆ ದೇವಸ್ಥಾನದಲ್ಲಿ ಘಟಸ್ಥಾಪನೆ, ಮಂಗಳಾರತಿ ನಡೆಯಲಿದೆ. 23ರಂದು ಸಂಜೆ 4.30ಕ್ಕೆ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳದವರಿಂದ ಸೌಂದರ್ಯ ಲಹರಿ, ಶ್ರೀ ದುರ್ಗಾ ಸಪ್ತಶತಿ ಪಠಣ ನಡೆಯಲಿದೆ.
ನಿತ್ಯ ಸಂಜೆ ವಿವಿಧ ಮಹಿಳಾ ಮಂಡಳಗಳಿಂದ ಭಜನೆ, ಭಕ್ತಿಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 2ರಂದು ವಿಜಯ ದಶಮಿ ಅಂಗವಾಗಿ ವಿಧಿ ವಿಧಾನ ಪೂರ್ವಕ ಪೂಜಾರಾಧನೆ, ಸಂಜೆ 5ಕ್ಕೆ ಪಲ್ಲಕ್ಕಿಯೊಂದಿಗೆ ಉತ್ಸವ ಮೂರ್ತಿ ಸಮೇತ ಬನ್ನಿ ಮಂಟಪದಲ್ಲಿ ಶಮಿ ಪೂಜನ, ದೇವಸ್ಥಾನದಲ್ಲಿ ದಸರಾ ಉತ್ಸವ ನಡೆಯಲಿದೆ.
ಸಂಜೆ 7ಕ್ಕೆ ದಸರಾ ಹಬ್ಬದ ಉದ್ಘಾಟನೆಯನ್ನು ಶಾಸಕ ಅರವಿಂದ ಬೆಲ್ಲದ ನೆರವೇರಿಸುವರು. ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ ಪಾಲ್ಗೊಳ್ಳುವರು. ಮಧ್ಯಾಹ್ನ 1ಕ್ಕೆ ಮಹಾಪ್ರಸಾದ, ಸಂಜೆ ದಾಂಡಿಯಾ, ಮಕ್ಕಳಿಂದ ವೇಷ ಭೂಷಣ ಸ್ಪರ್ಧೆಗಳು ನಡೆಯಲಿವೆ.