ಶ್ರೀರಾಜಶೇಖರ ಸ್ವಾಮೀಜಿ ವರ್ಧಂತಿ ಮಹೋತ್ಸವ, ನವನಗರದ ಕಾಶಿ ಶಾಖಾಮಠದಲ್ಲಿ ಆಯೋಜನೆ

IMG_20240127_205859_346.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರ ಸುತಗಟ್ಟಿಯ ಪಂಚಾಕ್ಷರಿನಗರದಲ್ಲಿನ ಕಾಶಿ ಶಾಖಾಮಠದ ಶ್ರೀರಾಜಶೇಖರ ಶಿವಾಚಾರ್ಯ ಸ್ವಾಮೀಜಿ 12ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ಸಿದ್ಧಾಂತ ಶಿಖಾಮಣಿ ಪ್ರವಚನ, ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಸಾಧಕರಿಗೆ ಗುರುರೆ ಕಾರ್ಯಕ್ರಮಗಳು ಜ. 29ರಿಂದ ಆರು ದಿನಗಳವರೆಗೆ ನಡೆಯಲಿವೆ.

ವಾರಾಣಶಿಯ ಕಾಶಿ ಮಹಾಪೀಠದ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶ್ರೀ ಜಗದ್ಗುರು ಪಂಚಾಚಾರ್ಯ ಶಿವಯೋಗ ಪುಣ್ಯಾಶ್ರಮ ಟ್ರಸ್ಟ್ ವತಿಯಿಂದ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ನಿತ್ಯ ಸಂಜೆ 6ಕ್ಕೆ ಸಿದ್ಧಾಂತ ಶಿಖಾಮಣಿ ಪ್ರವಚನ ಜರುಗಲಿದೆ.

ಫೆಬ್ರವರಿ 1ರಿಂದ 3ರ ವರೆಗೆ ಮಠದ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೊಜಿಸಲಾಗಿದೆ. ಫೆಬ್ರವರಿ 2ರಂದು ಬೆಳಗ್ಗೆ 7ಕ್ಕೆ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಹಾಗೂ ಭಕ್ತರಿಗೆ ಶಿವದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜ. 29ರಂದು ಸಂಜೆ 6ಕ್ಕೆ ಆಯೋಜಿಸಿರುವ ಪ್ರವಚನದಲ್ಲಿ ಸುಳ್ಳ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಗೋಕುಲದ ನಲಿಂಗ ದೇವರು ಧರ್ಮ ಸಂದೇಶ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net