ಹುಬ್ಬಳ್ಳಿ: ಇಲ್ಲಿಯ ನವನಗರದ ನವನಿರ್ಮಾಣ ಸಂದ ಆಶ್ರಯದಲ್ಲಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ 10ನೇ ವರ್ಷದ ಜಾತ್ರಾ ಮಹೋತ್ಸವ ನ. 21ರಿಂದ ಆಯೋಜಿಸಲಾಗಿದೆ.
ನವನಗರದ ನಂದೀಶ್ವರ ನಗರದಲ್ಲಿರುವ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪೂಜೆ, ಹವನ, ಜಾತ್ರಾ ಮಹೋತ್ಸವ, ಸಂಜೆ ಖ್ಯಾಸ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ತಂಡದಿಂದ ನಗೆ ಹಬ್ಬ ಏರ್ಪಡಿಸಲಾಗಿದೆ.
ನರಗುಂದದ ಬೆಳ್ಳೇರಿ ಶಿವಾನಂದ ಮಠದ ನಿಸರ್ಗ ಚಿಕಿತ್ಸಕರಾದ ಡಾ. ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹುಬ್ಬಳ್ಳಿಯ ಸಂಜೀವಿನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅಭಿಷೇಕ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ ಉಪಸ್ಥಿತರಿರುವರು.
ನ. 22ರಂದು ಸಂಜೆ ನೃತ್ಯ ಹಾಗೂ ವಿವಿಧ ಸಾಂಸತಿಕ ಕಾರ್ಯಕ್ರಮ, ನ. 23ರಂದು ಜಾತ್ರೆ, ಸಂಗೀತ ಸಂಜೆ, ಅತಿಥಿಗಳ ಸತ್ಕಾರ, ನ. 24ರಂದು ಮಧ್ಯಾಹ್ನ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.