ಹುಬ್ಬಳ್ಳಿ: ಇಲ್ಲಿಯ ನವನಗರ ಬಸವೇಶ್ವರ ಸರ್ಕಲ್ ಬ್ಯಾಂಕ್ ಆಫ್ ಬರೋಡಾ ಹತ್ತಿರ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ವೃಂದ ಹಾಗೂ ಶ್ರೀ ಸಾಯಿ ಯುವಕ ಮಂಡಳ ವತಿಯಿಂದ ಜ. 2ರಂದು ಸಂಜೆ 6.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಸುದರ್ಶನ ಬಾಳಿಗಾ ಮತ್ತು ಶ್ರೀ ಶೇಖರ ದೇವಾಡಿಗ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುವವು. ಪ್ರತಿ ವರ್ಷದಂತೆ ಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.