

ಮೂಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವಾನ್ನ ಪೂಜೆ(ಕದಿರು ತುಂಬಿಸುವ ಕಾರ್ಯಕ್ರಮವು ಆಶ್ವಿಜ ಶುದ್ಧ ಪಾಡ್ಯದ ಸೋಮವಾರ ನಡೆಯಿತು.
ಮುಂಜಾನೆ ಶ್ರೀಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆದು ದೇವಸ್ಥಾನದ ಶ್ರೀ ವ್ಯಾಸ ಮಹರ್ಷಿ ವೇದ ಪಾಠಶಾಲೆಯ ಒಳ ಪ್ರಾಂಗಣದಲ್ಲಿ ಬೆಳೆಸಿದ ಭತ್ತದ ಕದಿರಿಗೆ ಪೂಜೆ ಸಲ್ಲಿಸಿ ಕದಿರನ್ನು ಪಲ್ಲಕ್ಕಿಯಲ್ಲಿ ಇರಿಸಿ ಪೇಟೆ ಸವಾರಿ ನಡೆಯಿತು. ಬಳಿಕ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಕದಿರು ತಂದು ಒಳ ತುಂಬಿಸಿ ಶ್ರೀ ದೇವರ ಸನ್ನಿಧಿಯಲ್ಲಿ ಮಧ್ಯಾಹ್ನದ ವಿಶೇಷ ಪೂಜೆ ನಡೆದು ಪ್ರಸಾದ ಮತ್ತು ಕದಿರು ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನದ ಅರ್ಚಕ ವರ್ಗ, ಆಡಳಿತ ಮಂಡಳಿಯ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.