ನವಲಗುಂದ ಬಂದ್ ಯಶಸ್ವಿ

Navalgund Bandh successful
Published on

ನವಲಗುಂದ: ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಷಾ ನೀಡಿದ್ದ ಅವಮಾನಕಾರ ಹೇಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳಿಂದ ಕರೆ ನೀಡಿದ್ದ ನವಲಗುಂದ ಬಂದ್ ಶುಕ್ರವಾರ ಯಶಸ್ವಿಯಾಯಿತು.

ಬೆಳಗೆಯಿಂದ ಬಸ್ ಸಂಚಾರ, ಅಂಗಡಿ, ಮುಂಗಟ್ಟುಗಳು, ಹೋಟೆಲ್‌ಗಳು, ಶಾಲಾ-ಕಾಲೇಜ್ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ಸೂಚಿಸಲಾಯಿತು.

ಪ್ರತಿಭಟನಾಕಾರರು ಮೊದಲಿಗೆ ಐತಿಹಾಸಿಕ ನೀಲಮ್ಮನ ಕೆರೆಯ ಮುಂದೆ ಟಯರ್‌ಗೆ ಬೆಂಕಿ ಹಚ್ಚಿ, ಅಮಿತ್ ಷಾ ವಿರುದ್ಧ ದಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದರು. ನಂತರ ತಾಲೂಕು ಪಂಚಾಯಿತಿ ಎದುರು ಇರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಹಲಗೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಂತರ ಲಿಂಗರಾಜ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಿ, ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಲಾಯಿತು. ತಹಸೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಪುಂಡಲಿಕ ಚಲವಾದಿ, ಬೆಳಗಾವಿ ವಿಭಾಗದ ಸಂಚಾಲಕ ಶ್ರೀಮಂತ ನಡುವಿನಕೇರಿ, ಕಾಶಿನಾಥ ಕಾಳೆ, ಮಾಲತೇಶ ಚಲವಾದಿ, ನಾಗರಾಜ ಕಾಳೆ, ಶಂಕರ ಅಜಮನಿ, ಚೇತನಾ ಲಿಂಗದಾಳ, ಪರುಶರಾಮ ಚಲವಾದ, ಈರಣ್ಣ ಶಿಡಗಂಟಿ, ರಾಜು ನಡುವಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನ ಗೌಡ ಹಿರೇಗೌಡರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಮಂಜುನಾಥ ಜಾಧವ, ಮಹಾಂತೇಶ ಭೋವಿ, ಮಲ್ಲಿಕಾರ್ಜುನ ಬಿಳಾರ, ನಾಗಲಿಂಗಪ್ಪ ದೊಡ್ಡಮನಿ, ನಂದಿನಿ ಹಾದಿಮನಿ, ಗುರು ಚಲವಾದಿ, ಮೈಲಾರಪ್ಪ ವೈದ್ಯ, ರಘುನಾಥ ನಡುವಿನಮನಿ ಮತ್ತಿತರರು ಇದ್ದರು.

ಪಟ್ಟಣದಲ್ಲಿ ಸಂರ್ಪೂಣ ಸಂಚಾರ ನಿಷೇಧಿಸಿದ್ದರಿಂದ ಪ್ರಯಾಣಿಕರು ಸುಮಾರು ಎರಡು ಕಿ.ಮೀ.ನಷ್ಟು ನಡದುಕೊಂಡೆ ಹೋಗಬೇಕಾಯಿತು. ಅಲ್ಲದೆ, ಹೋಟೆಲ್‌ಗಳು ಬಂದ್ ಆಗಿದ್ದರಿಂದ ಪ್ರತಿಭಟನಾಕಾರರು ಕುಡಿಯುವ ನೀರು, ಉಪಹಾರ ಇಲ್ಲದೆ ಪರದಾಡುವಂತಾಯಿತು. ಪಟ್ಟಣದ ಮಾರುಕಟ್ಟೆ, ಬಸ್ ನಿಲ್ದಾಣ ಜನರಿಲ್ಲದೇ ಬಿಕೋ ಎಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net