

ನವಲಗುಂದ: ವಿಧಾನಸಭಾ ಕ್ಷೇತ್ರದಲ್ಲಿ ಸತತ ಮಳೆಯಿಂದ ರೈತರ ಬೆಳೆಗಳು ಸಂರ್ಪಣ ಹಾಳಾಗಿದ್ದು, ನೂರಾರು ಮನೆಗಳು ನೆಲಸಮವಾಗಿವೆ. ಸರ್ಕಾರ ರೈತರು ಮತ್ತು ಸಂತ್ರಸ್ಥರಿಗೆ ಪರಿಹಾರ ನೀಡದೇ ಬಡವರ ಬದುಕಿನ ಜತೆಗೆ ಚಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪಿಸಿದರು.
ತಾಲೂಕಿನ ತಿರ್ಲಾಪೂರ, ಶಿರಕೋಳ ಹಾಗೂ ಹನಸಿ ಗ್ರಾಮದಲ್ಲಿ ಮಂಗಳವಾರ ಬೆಳೆ ಹಾನಿ ಪರೀಶಿಲನೆ ನಡೆಸಿ ಅವರು ಮಾತನಾಡಿದರು.ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಪ್ಪರಿ ಹಳ್ಳದ ಕಾಮಗಾರಿಗೆ 312 ಕೋಟಿ ರೂ. ಅನುದಾನದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಿ ತಡೆಗೊಡೆ ಹಾಗೂ ತುಪ್ಪರಿ ಹಳ್ಳ ಸ್ವಚ್ಚಗೊಳಿಸಲಾಯಿತು. ಇದರಿಂದ ನೆರೆಯಿಂದ ಆಗುವ ಅಪಾರ ಪ್ರಮಾಣದ ಹಾನಿಯನ್ನು ತಪ್ಪಸಿದಂತಾಗಿದೆ. ತಡೆಗೋಡೆಯಿಂದ ಮೊರಬ, ಶಿರಕೋಳ, ಹನಸಿ ಗ್ರಾಮಗಳಿಗೆ ತುಂಬಾ ಅನುಕೂಲ ಆಗಿರುವ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಗೊವಿನಜೋಳ, ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗಳು ಹಾಳಾಗಿವೆ. ಬೆಳೆ ಹಾನಿಯಾದ ರೈತರು ಮತ್ತು ಮನೆ ಹಾನಿಯಾದವರಿಗೆ ಸೂಕ್ತ ಪರಿಹಾರ ನೀಡಬೇಕು. ಶಾಸಕರು ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೊಷಣೆ ಮಾಡಿಸಿ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಗಂಗಪ್ಪ ಮನಮಿ, ಎಸ್.ಬಿ. ದಾನಪ್ಪಗೌಡರ, ಅಂದಾನಯ್ಯ ಹಿರೇಮಠ, ಸಿದ್ದಲಿಂಗಪ್ಪ ಮದ್ನೂರ, ಶೇಖಪ್ಪ ಬಕ್ಕಣ್ಣವರ, ಎಸ್.ಜಿ. ಲೋಕಾಪೂರಮಠ, ಗುರುಸಿದ್ದಪ್ಪ ಮೆಣಸಿನಕಾಯಿ, ಬಸವರಾಜ ಆಕಳದ, ಸುಭಾಸ ಬೆಣ್ಣಿ, ಮಹೇಶ ಬಕ್ಕಣವರ, ಜಗದೀಶ ಮೆಣಸಿನಕಾಯಿ, ಸಿದ್ದಲಿಂಗಪ್ಪ ಕುಂದಗೋಳ, ಸಿದ್ದಲಿಂಗಪ್ಪ ಅಸುಂಡಿ, ಮುತ್ತಣ್ಣ ಮಾದರ, ರಾಮಪ್ಪ ಕಾಲವಾಡ, ದುರ್ಗಪ್ಪ ಸತ್ತಹಳ್ಳಿ ಇದ್ದರು.