ನವಲಿ ಗ್ರಾಮದಲ್ಲಿ ಕರೊನಾ ವೈರಸ್ ಹೋಗಲಾಡಿಸಲು ಹೋಮಕ್ಕೆ ಮೊರೆ

110820 Navali Village Corona Removal Mahadhanvanthari Homa
ಕನಕಗಿರಿ ತಾಲೂಕಿನ ನವಲಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕರೊನಾ ವೈರಸ್ ನಿರ್ಮೂಲನೆಗಾಗಿ ಮಂಗಳವಾರ ಮಹಾಧ್ವನಂತರಿ ಹೋಮ ನೆರವೇರಿಸಲಾಯಿತು.
Published on

ಕನಕಗಿರಿ: ಮಹಾಮಾರಿ ಕೊರೊನಾ ವೈರಸ್ ನಿರ್ಮೂಲನೆಗಾಗಿ ತಾಲೂಕಿನ ನವಲಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮಹಾಧ್ವನಂತರಿ ಹೋಮ ನೆರವೇರಿಸಲಾಯಿತು.

ಪುರೋಹಿತ ಮಾರ್ಕಂಡಯ್ಯ ಸ್ವಾಮಿ ಮಾತನಾಡಿ, ಆರು ತಿಂಗಳಿನಿಂದ ವೈರಸ್ ಇಡೀ ವಿಶ್ವವನ್ನೇ ಬಾಧಿಸಿದೆ. ತ್ವರಿತವಾಗಿ ಈ ವೈರಸ್ ಜನತೆಯಿಂದ ದೂರವಾಗಲು ಹೋಮ, ನವಗ್ರಹ ಪೂಜೆ ನಡೆಸಲಾಗಿದೆ ಎಂದರು.

ಅರಳಿಹಳ್ಳಿಯ ಶ್ರೀರಾಜರಾಜೇಶ್ವರಿ ಮಠದ ಬಸವರಾಜ ಶಾಸ್ತ್ರಿ , ಪುರೋಹಿತರಾದ ಬಸವರಾಜ ಸ್ವಾಮಿ ಕೆ.ಹೊಸಳ್ಳಿ, ಸೋಮಶೇಖರಯ್ಯ ಸ್ವಾಮಿ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ಶಿವಕುಮಾರ ಸ್ವಾಮಿ ಹಿರೇಮಠ, ಬಸವರಾಜ ಶಿವಯ್ಯ ಸ್ವಾಮಿ, ನಾಗನಗೌಡ, ಸಿದ್ಧನಗೌಡ ಪಾಟೀಲ್, ಭಜರಂಗಿ ಯುವಕ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಂಡರಗಿ, ಪದಾಧಿಕಾರಿಗಳಾದ ಉಮೇಶ ವಿಠಲಾಪುರ, ಮಂಜುನಾಥ ಹರ್ಲಾಪುರ, ಪಂಪನಗೌಡ ಪೋ.ಪಾಟೀಲ್, ಸಂಗಮೇಶ ಅಂಗಡಿ, ಯುವ ಬಳಗದ ಲಚ್ಚಪ್ಪ ಈಡಿಗೇರ್, ಸುರೇಶ ಖ್ಯಾಡೇದ್, ತಿಮ್ಮನಗೌಡ ಪೊ.ಪಾಟೀಲ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net