ನವಗ್ರಾಮದಲ್ಲಿ ಬರೆ ಕುಸಿತ

navagrama
Published on

ಕುಶಾಲನಗರ

ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ನವಗ್ರಾಮದಲ್ಲಿ ಬುಧವಾರ ರಾತ್ರಿಯ ಮಳೆಗೆ ಬರೆ ಕುಸಿದಿದ್ದು, ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ. ಶಂಶುದ್ಧೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ನವಗ್ರಾಮದ ದೇವಮ್ಮ ಎಂಬವರ ಮನೆಯ ಬರೆ ಕುಸಿದು ಬಿದ್ದಿದ್ದು, ಅಪಾಯದಿಂದ ದೇವಮ್ಮ ಪಾರಾಗಿದ್ದಾರೆ.

ನೆಯ ವಸ್ತುವೊಂದನ್ನು ತೆಗೆಯಲೆಂದು ಹೊರಬಂದಿದ್ದ ಸಂದರ್ಭ ಬರೆ ಕುಸಿದಿದ್ದು, ದೇವಮ್ಮ ಸುರಕ್ಷಿತವಾಗಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ. ಶಂಶುದ್ಧೀನ್ ಸ್ಥಳ ಪರಿಶೀಲನೆ ನಡೆಸಿ ಸಂಬAಧಿಸಿದವರ ಗಮನಕ್ಕೆ ತಂದರು.

ನಂತರ ಮಾತನಾಡಿದ ಅವರು, ನವಗ್ರಾಮ ಬೆಟ್ಡ ಗುಡ್ಡ ಪ್ರದೇಶವಾಗಿದ್ದು, ಸೂಕ್ತ ತಡೆಗೋಡೆಯಿಲ್ಲದೇ ಬಹಳಷ್ಟು ಮನೆಗಳು ಅಪಾಯದಲ್ಲಿವೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಜನರ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭ ಸ್ಥಳೀಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net