ನವದುರ್ಗಿಯರ ವೇಷಭೂಷಣ ಕಾರ್ಯಕ್ರಮ ಇಂದು

IMG-20250927-WA0132
ನವರಾತ್ರಿ ಅಂಗವಾಗಿ ವಿಶಾಲಾಕ್ಷಿ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು.
Published on

ಮದ್ದೂರು: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಸೆ.28ರಂದು ನವದುರ್ಗಿಯರ ವೇಷಭೂಷಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ, ವೇದಬ್ರಹ್ಮ ಡಾ.ರಾಘವೇಂದ್ರ ಪುರೋಹಿತ ಹೇಳಿದರು.

ನವರಾತ್ರಿ ಅಂಗವಾಗಿ ದೇಗುಲದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಮಾತನಾಡಿ, ನವರಾತ್ರಿ ಅಂಗವಾಗಿ ದೇಗುಲದಲ್ಲಿ ನಿತ್ಯ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಯಿಂದ ದೇವಾಲಯದಲ್ಲಿ ನವದುರ್ಗಿ ವೇಷಭೂಷಣ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ. ನವರಾತ್ರಿಯಲ್ಲಿ ಪ್ರತಿನಿತ್ಯ ವಿಶೇಷ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮದ್ದೂರಿನ ಸುನಾಗ್ ಮೇಕಪ್ ಸ್ಟುಡಿಯೋ ಶೋಭಾ ಅವರು ಮಕ್ಕಳಿಗೆ ನವದುರ್ಗಿ ಮೇಕಪ್ ಮಾಡಲಿದ್ದಾರೆ (ನವದುರ್ಗಿಯ ನೃತ್ಯವನ್ನು ಅನಿಲ್ ಡಾನ್ಸ್ ಅಕಾಡೆಮಿ ಸದಸ್ಯರು ಮಾಡಲಿದ್ದಾರೆ). ಮದ್ದೂರಿನ ರೆಬೆಲ್ ಡಾನ್ಸ್ ಶರತ್ ತಂಡದಿಂದ ನೃತ್ಯ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.

ಶಂಕರಸಭಾ ಅಧ್ಯಕ್ಷ ಗುರುಸ್ವಾಮಿ, ಬ್ರಾಹ್ಮಣ ಸಭಾದ ಸತ್ಯನಾರಾಯಣ ರಾವ್, ಸಹಾಯಕ ಅರ್ಚಕರ ನರಸಿಂಹ ಪ್ರಸಾದ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net