ಕಾಮಾಕ್ಷಿ ದೇವಸ್ಥಾನದಲ್ಲಿ ನವಚಂಡಿ ಹೋಮ

h7-kamakshi
Published on

ಹುಬ್ಬಳ್ಳಿ: ನವರಾತ್ರಿ ಉತ್ಸವ ನಿಮಿತ್ತ ಇಲ್ಲಿಯ ದೇಶಪಾಂಡೆ ನಗರದ ಶ್ರೀ ಲಕ್ಷ್ಮೀನಾರಾಯಣಿ ಕಾಮಾಕ್ಷಿ ದೇವಸ್ಥಾನದಲ್ಲಿ ಇತ್ತೀಚೆಗೆ ವೇ. ಪೃಥ್ವಿರಾಜ ಭಟ್ ನೇತ್ರತ್ವದಲ್ಲಿ ನವಚಂಡಿ ಹೋಮ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದ ದೇವಿಗೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೇವಿಗೆ ಕಮಲ ಹೂವಿನ ಅಲಂಕಾರ ಮಾಡಲಾಗಿತ್ತು. ಹೋಮದ ನಂತರ ಅನ್ನ ಸಂತರ್ಪಣೆ ಜರುಗಿತು.

ಪ್ರಮುಖರಾದ ಪರೀಕ್ಷಿತ್ ಭಟ್, ರವಿ ನಾಯಕ್, ರಮೇಶ ನಾಯಕ, ಸದಾನಂದ ಕಾಮತ, ಮಹೇಶ ಮಾನಗೆ, ಸುಮೇಶ ಕಾಮತ, ಎನ್.ವಿ. ಫೈ, ವಿಠ್ಠಲ ಭಟ್, ನಿಶಾ ಭಟ್, ಸುಪ್ರಭಾ ಕಾಮತ, ಕೃಷ್ಣಕಾಂತ ಪ್ರಭು ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net