ಜಯಂತಿ ಕಾರ್ಯಕ್ರಮಗಳಿಂದ ಮಹಾತ್ಮರು ಜೀವಂತ, ದೊಡ್ಡವಾಡ ಅಭಿಮತ

IMG-20250407-WA0017-1.jpg
Published on

ಹುಬ್ಬಳ್ಳಿ: ಮಹಾತ್ಮರು, ತಪಸ್ವಿಗಳು, ಅವತಾರ ಪುರುಷರು ಈ ಭೂಮಿಯಲ್ಲಿ ಜನಿಸಿ ಮರೆಯಾಗಿದ್ದರೂ ಸದಾ ಅವರ ಇರುವಿಕೆಯನ್ನು ಜಯಂತಿ ಕಾರ್ಯಕ್ರಮಗಳು ನೆನಪಿಸುತ್ತವೆ ಎಂದು ಕೆಪಿಸಿಸಿ ವಕ್ತಾರ, ಸಾಮಾಜಿಕ ಕಾರ್ಯಕರ್ತ ಗಂಗಾಧರ ದೊಡ್ಡವಾಡ ಅಭಿಪ್ರಾಯ ಪಟ್ಟರು.

ಇಲ್ಲಿಯ ನವ ಅಯೋಧ್ಯಾನಗರ ಶ್ರೀ ಆರೂಢ ಸ್ವಾಮಿ ಮಠದಲ್ಲಿ ಶ್ರೀ ಜ್ಞಾನಜ್ಯೋತಿ ಕಲಾಮಂಡಳದ ವತಿಯಿಂದ ಹಮ್ಮಿಕೊಂಡ ಶ್ರೀರಾಮ ಮತ್ತು ಶ್ರೀ ಸಿದ್ಧಾರೂಢಪ್ಪಗಳ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ಜಯಂತಿ ಆಚರಣೆಯಲ್ಲಿ ಅಂತಹ ದೇವತಾ ಶಕ್ತಿ ಪಡೆದ ಮಹಾತ್ಮರು ಜೀವಂತವಾಗಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಮಹಾತ್ಮರು ಅದೃಶ್ಯ ಶಕ್ತಿಯಾಗಿ ಮನುಕುಲವನ್ನು ನಿತ್ಯ ಕಾಯುತ್ತಿರುವರು. ಈ ಕಾರಣಕ್ಕಾಗಿ ನಮ್ಮ ದೇಶದಲ್ಲಿ ಒಂದೊಂದು ಪ್ರದೇಶದಲ್ಲಿ ನಾಲ್ಕೈದು ದೇವಸ್ಥಾನಗಳು ಕಂಡು ಬರುತ್ತವೆ ಎಂದರು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿಶ್ವನಾಥ ಹಿರೇಗೌಡರ, ಪಾಲಿಕೆ ಮಾಜಿ ಸದಸ್ಯ ದಶರಥ ವಾಲಿ, ದ್ಯಾಮಣ್ಣಾ ಡೋಂಗಿ, ಬಡಿಗೇರ,  ತೇಜಸ್ವಿನಿ ಬೆಂಗಳೂರು, ಮಂಗಲಾ ತಿಪ್ಪಶೆಟ್ಟಿ, ಗಿರೀಜಾ ಮುಗಳಿ, ವಿಶಾಲಾಕ್ಷಿ ಅಂಗಡಿ, ವಿಶಾಲಕ್ಷಿ ಟೊಂಗಳಿ, ಮಂಜುಳಾ ಹೊನ್ನಕೇರಿ, ವೀಣಾ ಬಡಿಗೇರ, ದಿವ್ಯ ದೇವುಡುಕರ, ಸಕ್ಕುಬಾಯಿ ಬಡಿಗೇರ, ವರದಾಶಂಕರ ಹಿರೇಮಠ, ಫಕ್ಕೀರೇಶ ಬಡಿಗೇರ, ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net