

ಮೈಸೂರು: ಸೀಳು ತುಟಿ, ಮೂಗು ಸರಿಪಡಿಸುವಿಕೆ ಮೊದಲಾದ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಯಾದವರಿಗಿಯಲ್ಲಿ ತೆರೆಯಲಾಗಿರುವ ರಶ್ವಿಕ್ ಇಎನ್‌ಟಿ ಮುಖದ ಪ್ಲಾಸ್ಟಿಕ್ ಸರ್ಜರಿ ಆಸ್ಪತ್ರೆ ಉದ್ಘಾಟನಾ ಸಮಾರಂಭವು ಡಿ.17ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಆಸ್ಪತ್ರೆ ನಿರ್ದೇಶಕಿ ಡಾ.ರಾಧಾಸಿಂಹ ತಿಳಿಸಿದರು.
ನಮ್ಮ ಆಸ್ಪತ್ರೆ ಇತರ ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದೆ. ಎಲ್ಲ ವಯಸ್ಸಿನವರೂ ಸೇವೆ ಪಡೆಯಬಹುದಾಗಿದೆ. ಕಾಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ, ಆಯುಷ್ ಮಾಜಿ ನಿರ್ದೇಶಕರಾದ ಡಾ.ಎನ್.ರತ್ನಾ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.