ಭಾರತ ಸೇವಾದಳ ಘಟಕ ಉದ್ಘಾಟನೆ

New Mahesh357
Published on

ಹುಬ್ಬಳ್ಳಿ : ನಗರದ ಎನ್.ಎಲ್.ಇ. ಸೊಸೈಟಿಯ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭಾರತ ಸೇವಾದಳ ಘಟಕವನ್ನು ಶುಕ್ರವಾರ ಆರಂಭಿಸಲಾಯಿತು.

ಘಟಕ ಉದ್ಘಾಟಿಸಿ ಮಾತನಾಡಿದ ಧಾರವಾಡ ಜಿಲ್ಲಾ ವಿಭಾಗ ಸಂಘಟಕ ಪ್ರಕಾಶ ಗೋಣಿ, ಸೇವೆಯೇ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತ ಸೇವಾದಳ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ಜನ ಸೇವೆಯನ್ನು ಅಳವಡಿಸಿಕೊಳ್ಳಬೇಕು. ಸಂಘಟನಾತ್ಮಕ ಬದಲಾವಣೆಗಳು ದೇಶವನ್ನು ಮನ್ನುಡೆಸುತ್ತವೆ. ಶಿಸ್ತು ಮತ್ತು ಶಾಂತಿ ಸೇವಾದಳದ ಮೂಲ ಆಧಾರ ಸ್ಥಂಭಗಳಾಗಿವೆ ಎಂದರು.

ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳ ಮೂಲಕ ಸೇವಾ ದಳದ ಚಟುವಟಿಕೆಗಳನ್ನು ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡು, ಜನ ಸೇವೆಗಳ ಮೂಲಕ ಮುಂದಿನ ಶಿಸ್ತಿನ ನಾಯಕರನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರಾಮ ಮೋಹನ್ ಮಾತನಾಡಿ, ಭಾರತ ಸೇವಾದಳದ ಕೊಡುಗೆ ಅತ್ಯಂತ ವಿಶೇಷವಾದದ್ದು. ಅದು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ದೇಶಪ್ರೇಮದ ಜೊತೆಗೆ ಶಿಸ್ತಿನ ಶಿಪಾಯಿಗಳನ್ನಾಗಿ ಮಾರ್ಪಡಿಸುತ್ತದೆ ಎಂದು ತಿಳಿಸಿದರು.

ಪ್ರತೀಕ ಪತ್ತಾರ ಮತ್ತು ವಿನೋದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಚಾರ್ಯ ರಮೇಶ ಹೊಂಬಾಳೆ, ಭಾರತ ಸೇವಾದಳದ ಘಟಕ ಸಂಚಾಲಕ ಪ್ರೊ. ಐ.ಎಸ್. ಹಿರೇಮಠ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net