ಹುಬ್ಬಳ್ಳಿ: ಇಲ್ಲಿನ ನಾಟ್ಯಾಂಜಲಿ ಕಲಾ ಮಂದಿರದ ವಾರ್ಷಿಕೋತ್ಸವ ನಿಮಿತ್ತ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದೊಂದಿಗೆ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜ. 20ರಂದು ಸಂಜೆ 4ಕ್ಕೆ ನೃತ್ಯಾರ್ಪಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಸೌಭಾಗ್ಯ ಮಹಾಲೆ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾ ಮಂದಿರದಲ್ಲಿ ಸುಮಾರು 300 ವಿದ್ಯಾಥಿರ್ಗಳು ತರಬೇತಿ ಪಡೆಯುತ್ತಿದ್ದಾರೆ. ನೃತ್ಯಾರ್ಪಣದಲ್ಲಿ 200ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಸೀತಾರಾಮ ಕಲ್ಯಾಣ ಹಾಗೂ ಮಹಿಷಾಸುರ ರ್ಮದಿನಿ ಎಂಬ ನೃತ್ಯರೂಪಕವನ್ನು ವಿದ್ಯಾರ್ಥಿನಿಯರು ಪ್ರದಶಿರ್ಸುತ್ತಿದ್ದಾರೆ. 21 ನೃತ್ಯಗಳು ನಡೆಯಲಿವೆ. 18 ವರ್ಷಗಳಿಂದ ಭರತನಾಟ್ಯ ನೃತ್ಯಾಭ್ಯಾಸ ಮಾಡಿ ವಿದ್ವತ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದುಷಿ ರೋಹಿಣಿ ಭಟ್ಟಕೂರ್ಸೆ, ವಿದುಷಿ ಅಲ್ಕಾ ಪ್ರಭು ಅವರಿಗೆ ನಾಟ್ಯರಮಣಿ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಸುಜನಿ ನಾಟ್ಯ ಶಾಲೆಯ ವಿದುಷಿ ಸುನಿತಾ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು. ಸಂಚಾರ ವಿಭಾಗದ ಎಸಿಪಿ ವಿನೋದ ಮುಕ್ತೇದಾರ ಅಧ್ಯಕ್ಷತೆ ವಹಿಸುವರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಮಹಿಳಾ ವಿದ್ಯಾ ಪೀಠ ಆಡಳಿತಾಧಿಕಾರಿ ಗದಗ ಎಸ್.ಜಿ. ಅತಿಥಿಗಳಾಗಿ ಆಗಮಿಸುವರು.
ಕಲಾ ಮಂದಿರದ ಸಹಕಾರ್ಯದರ್ಶಿ ಆಶಾ ಪ್ರಭು, ಆಶಾ ಚವ್ಹಾಣ, ಇತರರು ಗೋಷ್ಠಿಯಲ್ಲಿದ್ದರು.