

ಮೈಸೂರು: ರಂಗಾಯಣದ ವನರಂಗದಲ್ಲಿ ಜ.24, 25ರಂದು ಸಂಜೆ 7ಕ್ಕೆ ನಾಟ್ಯಾಲೇಖ ರಂಗಸಮೂಹ ವತಿಯಿಂದ ನಾಟ್ಯಲೇಖ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಮಿತ್ ರೆಡ್ಡಿ ಹೇಳಿದರು.
ಹಿರಿಯ ರಂಗಕರ್ಮಿ ಬಿ.ಎಂ.ರಾಮಚಂದ್ರ ಜ.24ರಂದು ಸಂಜೆ 6.30ಕ್ಕೆ ನಾಟಕೋತ್ಸವಕ್ಕೆ ಚಾಲನೆ ನೀಡುವರು. ಅತಿಥಿಯಾಗಿ ರಂಗಾಯಣ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಪಾಲ್ಗೊಳ್ಳಲಿದ್ದಾರೆ. ಸಂಜೆ 7ಕ್ಕೆ ನೀನಾಸಂ ತಿರುಗಾಟ ತಂಡದಿಂದ ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ. ಅಭಿರಾಮ್ ಬಡ್ಕಮ್ಕರ್ ರಚನೆಯ ಈ ನಾಟಕವನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿ ಸಿದ್ದು, ವಿದ್ಯಾನಿಧಿ ವನರಾಸೆ ನಿರ್ದೇಶನದಲ್ಲಿ ನಾಟಕ ಮೂಡಿ ಬರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.25 ರಂದು ಸಂಜೆ 7ಕ್ಕೆ ಭವಭೂತಿ ರಚನೆಯ ಕೆ.ವಿ.ಅಕ್ಷರ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿರುವ ‘ಮಾಲತಿ ಮಾಧವ’ ನಾಟಕ ಪ್ರದರ್ಶನಗೊಳ್ಳಲಿದೆ. ಮಾಹಿತಿಗೆ ಮೊ: ಮೊ.6361848788 ಸಂಪರ್ಕಿಸಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿ.ಡಿ.ಮಧುಸೂದನ್, ಖಜಾಂಚಿ ಮಹೇಶ್ ಕಲ್ಲತ್ತಿ ಇದ್ದರು.