ಪ್ರಕೃತಿಯೊಂದಿಗೆ ಬಾಳುವುದನ್ನು ರೂಢಿಸಿಕೊಳ್ಳಿ

PROBUS CLUB NEW
Published on

ಹುಬ್ಬಳ್ಳಿ : ಪ್ರತಿಯೊಬ್ಬರು ಪ್ರಕೃತಿಯೊಂದಿಗೆ ಬಾಳುವದನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಅಧಿಕಾರಿ ಶಂಕರ ಕಪನಿಪತಿರಾಜ ಹೇಳಿದರು.

ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುಧಾಯ ಭವನದಲ್ಲಿ ಪ್ರೋಬಸ್ ಕ್ಲಬ್, ಉಣಕಲ್ಲ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕ್ಲಬ್​ನ ಮಾಸಿಕ ಸಭೆ ಮತ್ತು ಶ್ರೀಮತಿ ನಾಗಮ್ಮ ಈಶ್ವರಪ್ಪ ಅಳಗುಂಡಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ತಾರತಿ ತೋಟಗಳ ಮಹ್ವತ ಕುರಿತು ಅವರು ಉಪನ್ಯಾಸ ನೀಡಿದರು.

ಮನೆಗಳಿಗೆ ಬೇಕಾಗುವ ತರಕಾರಿಯನ್ನು ತಾರಸಿ ತೋಟಗಳಲ್ಲಿ ಬೆಳೆಯಬಹುದುದೆಂಬು ಎಂಬುವುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.

ಅನುಭವಗಳಿಂದ ಒಳ್ಳೆಯ ಹವ್ಯಾಸಗಳು ಬೆಳೆಯುತ್ತವೆ. ನಮಗೆ ಸಮಯವಿಲ್ಲ, ಜ್ಞಾನವಿಲ್ಲ ಮತ್ತು ಜಾಗವಿಲ್ಲ ಎಂಬುದನ್ನು ಹೇಳದೆ, ಇರುವ ಜಾಗವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆ ಎಂಬುದನ್ನು ತಿಳಿಸಿದರು.

ಆರೋಗ್ಯವಂತರಾಗಿ ಬಾಳಲು ತಾರಸಿ ತೋಟದಲ್ಲಿ ತರಕಾರಿ, ಹಣ್ಣು ಬೆಳೆಯುವದನ್ನು ತಿಳಿಸಿದರು. ಸಾವಯವ ತರಕಾರಿ ಬೆಳೆಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಂಘ, ಸಂಸ್ಥೆಗಳು ಕಾರ್ಯ ಪ್ರವರ್ತರಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಜಾನಪದ ಕಲಾವಿದ ಬಸವರಾಜ ಗೊರವರ ಅವರು, ಶರಣರು, ಸಂತರು, ದಾರ್ಶನಿಕರ ಕೊಡುಗೆಗಳನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ, ನೆಮ್ಮದಿ ಬದುಕು ಸಾಧಿಸಲು ಪ್ರತಿಯೊಬ್ಬರು ತಾರಸಿ ತೋಟ ಮತ್ತು ಉದ್ಯಾನಗಳ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಹೇಳಿದರು.

ವಿ.ಬಿ. ಕಣವಿ ಪ್ರಾರ್ಥಿಸಿದರು. ಡಾ. ಬಿ.ಸಿ. ಕೋಟಿ ಸ್ವಾಗತಿಸಿದರು. ಎಸ್.ಎಸ್. ಕರಡಿ ನಿರೂಪಿಸಿದರು. ಬಿ.ಎಸ್. ಮಾಳವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net