ನಿಸರ್ಗ ಸ್ನೇಹಿ ಕೈಚೀಲ ಬಳಸಲಿ

4
Published on

ಚಿಕ್ಕೋಡಿ: ಜಾಗತಿಕ ತಾಪಮಾನ ಹೆಚ್ಚಾಗಿರುವುದರಿಂದ ಹವಾಮಾನದಲ್ಲಿ ಏರುಪೇರು ಉಂಟಾಗಲಿದೆ. ಆದ್ದರಿಂದ ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿ ವರ್ಗವನ್ನು ಉಳಿಸಬೇಕೆಂದು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಆರ್. ನಾಯ್ಕ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಮಾತನಾಡಿ, ಮರು ಉತ್ಪಾದನೆಯಾದ ಶಕ್ತಿ ಸಂಪನ್ಮೂಲಗಳು ಬರಿದಾಗದಂತೆ ನೋಡಿಕೊಳ್ಳಬೇಕು. ಮಾನವಕುಲಕ್ಕೆ ಅಪಾಯಕಾರಿಯಾದ ಚಟುವಟಿಕೆಗಳನ್ನು ತಡೆಯಬೇಕು. ವಾಹನಗಳ ಬಳಕೆ ಕಡಿಮೆಮಾಡಬೇಕು. ಪರಿಸರ ಸ್ನೇಹಿ ಕೈಚೀಲ ಬಳಸಬೇಕು ಹಾಗೂ ಪರಿಸರ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ.ಡಿ.ಬಿ.ಸೊಲಾಪುರೆ ಅಧ್ಯಕ್ಷತೆ ವಹಿಸಿದ್ದರು. ವಿ.ಎಸ್.ಬಿಳಗಿ, ದೀಪಾಲಿ ಪಾಟೀಲ, ಪ್ರಿಯಾಂಕಾ ಚವ್ಹಾಣ, ದಿವ್ಯಾ ರಾವಟೆ, ಎಸ್.ಡಿ.ಕಾಜಿ, ಪ್ರಭಾಕರ ಕಮತೆ, ಕೆ.ಎಲ್.ಕಾಂಬಳೆ, ಎಂ.ಎಂ.ಪಾಟಿಲ, ಆರ್.ಎಸ್.ಮುರದುಂಡೆ, ಎಸ್.ಡಿ.ಶಿರಹಟ್ಟಿ ಇತರರಿದ್ದರು. ಉಪನ್ಯಾಸಕಿ ಸವಿತಾ ನಾಗರಾಳೆ ಸ್ವಾಗತಿಸಿದರು. ಇಕೋ ಕ್ಲಬ್ ಕಾರ್ಯದರ್ಶಿ ಸುರಬಿ ಸುರಂಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net