

ಮಸ್ಕಿ: ಭಾರತೀಯ ಆರೋಗ್ಯ ಪದ್ಧತಿ ಶ್ರೇಷ್ಠವಾಗಿದ್ದು, ಆಹಾರವೇ ಉತ್ತಮ ಔಷಧವಾಗಿದೆ. ಗಿಡಮೂಲಿಕೆಗಳನ್ನು ಮನೆಯ ಅಂಗಳದಲ್ಲಿ ಬೆಳೆಸುವ ಮೂಲಕ ಸಣ್ಣ ಕಾಯಿಲೆಗಳಿಗೆ ಬಳಸಬಹುದು ಎಂದು ಪತಂಜಲಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಚಂದ್ರಕಲಾ ದೇಶಮುಖ ಹೇಳಿದರು.
ಪಟ್ಟಣದ ಸೊಮನಾಥ ದೇವಸ್ಥಾನದಲ್ಲಿ ಜಡಿ ಬೂಟಿ ದಿವಸ್-ಗಿಡಮೂಲಿಕಾ ವಿತರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಪ್ರಕೃತಿ ಸಂಪತ್ತು ಮತ್ತು ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಪ್ರತಿಯೊಬ್ಬರೂ ಗಿಡಮೂಲಿಕೆಗಳನ್ನು ಬೆಳೆಸಬೇಕು ಎಂದು ದೇಶಮುಖ ಹೇಳಿದರು.
ಮಹಿಳೆಯರಿಗೆ ಗಿಡಮೂಲಿಕೆಗಳನ್ನು ವಿತರಿಸಲಾಯಿತು. ಪತಂಜಲಿ ಸಮಿತಿ ತಾಲೂಕು ಘಟಕದ ಉಪಾಧ್ಯಕ್ಷೆ ಪುಷ್ಪಾ ಬಿಜ್ಜಳ, ಲತಾ, ಅಮೃತಾ ಜೋಗಿನ್, ಸುವರ್ಣ ಬ್ಯಾಳಿ, ಯಶೋದಾ ಕಡಾಮುಡಿಮಠ, ಕಸ್ತೂರಿ ಇತ್ಲಿ, ಸವಿತಾ ಗಿಣಿವಾರ, ಅಮೃತಮ್ಮ, ಶಿವಲೀಲಾ ಗಚ್ಚಿನಮಠ ಇತರರಿದ್ದರು.