ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಪ್ರಶಸ್ತಿ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ ಮಿಷನ್​ ಯೋಜನೆಯ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಸೆ. 14ರಿಂದ ಅ. 1ರವರೆಗೆ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ ಎಂಬ ಕಾರ್ಯಕ್ರಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಹಾಗೂ ಇತರ ಐಇಸಿ ಕಾರ್ಯಕ್ರಮಗಳಲ್ಲಿ 8 ಘಟಕವಾರು ಅತ್ಯುತ್ತಮ ಕೊಡುಗೆಗಳನ್ನು ನೀಡಿದ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಸ್ವಚ್ಛತಾ ಕೀ ಭಾಗೀದಾರಿ ವಿಭಾಗದಲ್ಲಿ ನವಲಗುಂದ ಪುರಸಭೆ, ಹು-ಧಾ ಮಹಾನಗರ ಪಾಲಿಕೆ, ಅಳ್ನಾವರ ಪಟ್ಟಣ ಪಂಚಾಯಿತಿ, ಸ್ವಚ್ಛತಾ ಲಕ್ಷ್ಮೀತ ಇಕಾಯಿ ವಿಭಾಗದಲ್ಲಿ ಹು-ಧಾ ಮಹಾನಗರ ಪಾಲಿಕೆ, ಕಲಟಗಿ ಪಟ್ಟಣ ಪಂಚಾಯಿತಿ, ನವಲಗುಂದ ಪುರಸಭೆ, ಸ್ವಚ್ಛ ಫುಟ್ ಸ್ಟ್ರೀಟ್​ ವಿಭಾಗದಲ್ಲಿ ನವಲಗುಂದ ಪುರಸಭೆ, ಹು-ಧಾ ಮಹಾನಗರ ಪಾಲಿಕೆ, ಅಣ್ಣಿಗೇರಿ ಪುರಸಭೆ, ವೇಸ್ಟ್​ ಟು ಆರ್ಟ್​ ವಿಭಾಗದಲ್ಲಿ ಕುಂದಗೋಳ ಪಟ್ಟಣ ಪಂಚಾಯಿತಿ, ಅಣ್ಣಿಗೇರಿ ಪುರಸಭೆ, ನವಲಗುಂದ ಪುರಸಭೆ, ಸಾಯಿ ಮಿತ್ರಾ ಸುರಾ ಶಿವಿರ್​ ವಿಭಾಗದಲ್ಲಿ ಹು-ಧಾ ಮಹಾನಗರ ಪಾಲಿಕೆ, ನವಲಗುಂದ ಪುರಸಭೆ, ಅಳ್ನಾವರ ಪಟ್ಟಣ ಪಂಚಾಯಿತಿ, ಬೆಸ್ಟ ಇನೋವೇಷನ್​ ಅಂಡರ್​ ಎಸ್​ಬಿಎಂ ವಿಭಾಗದಲ್ಲಿ ನವಲಗುಂದ ಪುರಸಭೆ, ಹು-ಧಾ ಮಹಾನಗರ ಪಾಲಿಕೆ, ಅಣ್ಣಿಗೇರಿ ಪುರಸಭೆ, ಪಬ್ಲಿಕ್​ ಅಡ್ವೊಕಸಿಯಲ್ಲಿ ನವಲಗುಂದ ಪುರಸಭೆ, ಹು-ಧಾ ಮಹಾನಗರ ಪಾಲಿಕೆ, ಅಳ್ನಾವರ ಪಟ್ಟಣ ಪಂಚಾಯಿತಿ ಹಾಗೂ ಪಾರ್ಟನರ್ಸ್​ ಫಾರ್​ ಎಸ್​ಎಚ್​ಎಸ್​ನಲ್ಲಿ ಹು-ಧಾ ಮಹಾನಗರ ಪಾಲಿಕೆ, ನವಲಗುಂದ ಪುರಸಭೆ, ಅಳ್ನಾವರ ಪಟ್ಟಣ ಪಂಚಾಯಿತಿ ಪ್ರಶಸ್ತಿ ಪಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net