ಮಹಿಳೆಯರ ಪ್ರಗತಿಗೆ ಪ್ರಕೃತಿ ಜ್ಞಾನ ವಿಕಾಸ ಸಹಕಾರಿ

19 09 2025_BGR_RURAL_PAGE_5B
ಹಲಸಹಳ್ಳಿಯಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಕೃತಿ ಜ್ಞಾನ ವಿಕಾಸದ ವಾರ್ಷಿಕೋತ್ಸವದಲ್ಲಿ ಜ್ಞಾನ ವಿಕಾದ ತಾಲೂಕು ಸಮನ್ವಯಾಧಿಕಾರಿ ವಸಂತ, ವಲಯ ಮೇಲ್ವಿಚಾರಕ ಮಹೇಶ್​, ಗ್ರಾಪಂ ಸದಸ್ಯ ಚಂದ್ರಶೇಖರ್​ ಇತರರು ಇದ್ದರು.
Published on

ನಂದಗುಡಿ : ಗ್ರಾಮೀಣ ಭಾಗದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಕೃತಿ ಜ್ಞಾನ ವಿಕಾಸ ಸಹಕಾರಿ ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ವೆಂಕಟೇಶ ಹೇಳಿದರು. ಹೊಸಕೋಟೆ ತಾಲೂಕಿನ ಹಲಸಹಳ್ಳಿಯಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಕೃತಿ ಜ್ಞಾನ ವಿಕಾಸದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ರಾಜ್ಯಾದ್ಯಂತ 6,500 ಜ್ಞಾನ ವಿಕಾಸ ಕೇಂದ್ರಗಳಿದ್ದು, 3,44,245 ಸದಸ್ಯರಿದ್ದು, ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಶೈಕ್ಷಣಿಕ ಮತ್ತು ಕಾನೂನು ಸಲಹೆ ಸೇರಿ ಆರೋಗ್ಯ ವಿಮೆ ಹಾಗೂ ವಿವಿಧ ಕ್ರೀಡೆಗಳು ಸಾಂಸತಿಕ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಜತೆಗೆ ಪ್ರತಿತಿಂಗಳು ಮಾಸಿಕ ಸಭೆ ನಡೆಸುವುದಲ್ಲದೆ ಮಹಿಳೆಯರ ಜ್ಞಾನಕ್ಕಾಗಿ ಪೊಲೀಸ್​ ಠಾಣೆ, ಅಗ್ನಿಶಾಮಕ ಠಾಣೆ ಸೇರಿ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯ ಅರಿವು ಮೂಡಿಸುವ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಪ್ರೆಸ್​ ಕ್ಲಬ್​ ಕಾರ್ಯದರ್ಶಿ ಎಂ.ಎನ್​.ಆರ್​.ನಟರಾಜ್​ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ 48 ವಿವಿಧ ಕಾರ್ಯಕ್ರಮ ನೀಡಿದ್ದು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣೊಬ್ಬಳು ವಿಕಸನವಾದರೆ ಕುಟುಂಬವೊಂದು ವಿಕಸನಗೊಂಡಂತೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆಯರ ಏಳಿಗೆಗೆ ಹಾಗೂ ಆರೋಗ್ಯ ಸಮಸ್ಯೆಗಳಾದ ಸ್ತನ ಕ್ಯಾನ್ಸರ್​ ಗರ್ಭಕೋಶದ ಕಾಯಿಲೆ ಸೇರಿ ಹಲವು ಸಮಸ್ಯೆ, ಮೂಢನಂಬಿಕೆ ಮತ್ತು ಸಂಕೋಚದಿಂದ ಹೇಳಿಕೊಳ್ಳದೆ ರೋಗ ಉಲ್ಭಣಗೊಂಡಾಗ ಆಸ್ಪತ್ರೆ ಸೇರಿದೆ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅವುಗಳ ನಿವಾರಣೆಗಾಗಿ ತ ವೈದ್ಯರಿಂದ ಅರಿವು ಮತ್ತು ಆರೋಗ್ಯಸೇವೆ ನೀಡುತಿದ್ದು, ಸ್ವಾವಲಂಬಿ ಬದುಕುಗೆ ಜ್ಞಾನ ವಿಕಾಸದ ಮೂಲಕ ಶ್ರಮಿಸುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net