ಕಲ್ಪಿತ ಕಾರ್ಯಾಚರಣೆ ಹೆಸರಲ್ಲಿ - ಮಾವಿನ ಮರಕ್ಕೆ ಕೊಡಲಿಯೇಟು

PTR_18 MAY_3
Published on


ಪುತ್ತೂರು: ಪ್ರಾಕೃತಿಕ ವಿಕೋಪದ ಕಲ್ಪಿತ ಕಾರ್ಯಾಚರಣೆ ಹೆಸರಿನಲ್ಲಿ ಬೊಳುವಾರಿನಲ್ಲಿ ಮಾವಿನ ಮರವೊಂದನ್ನು ಕಡಿದು ಹಾಕಲಾಗಿದೆ.


ಪಕ್ಕದಲ್ಲಿದ್ದ ಮಾವಿನ ಮರ ಇತ್ತೀಚೆಗೆ ಬಿದ್ದಿದೆ ಎಂಬ ಕಾರಣಕ್ಕೆ ಅಲ್ಲೇ ಇದ್ದ ಇನ್ನೊಂದು ಮರವನ್ನು ತೆರವು ಮಾಡಲಾಗಿದೆ. ಸ್ಥಳಾಂತರ ಮಾಡಲು ಅವಕಾಶಗಳಿದ್ದರೂ, ಮರದ ಮೇಲ್ಭಾಗ ಟೊಳ್ಳು ಎಂಬ ಕಾರಣ ನೀಡಿ ಬುಡದಿಂದಲೇ ಮರ ತೆರವು ಕಾರ್ಯ ಮಾಡಲಾಗಿದೆ.


ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾರ್ಗದರ್ಶನದಲ್ಲಿ ಪುತ್ತೂರು ನಗರದಲ್ಲಿ ಮುಂಗಾರು ಮಳೆಯ ಸಂದರ್ಭ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಪುತ್ತೂರು ತಹಸೀಲ್ದಾರ್ ಕುಂಞÂ ಅಹಮ್ಮದ್, ನಗರ ಸಭೆ ಪೌರಾಯುಕ್ತ ಬದ್ರುದ್ದಿನ್ ಸೌದಾಗರ, ವಲಯ ಅರಣ್ಯ ಅಧಿಕಾರಿ ಕಿರಣ್ ಸೇರಿ ವಿವಿಧ ಇಲಾಖೆಯ ಅಽಕಾರಿಗಳು ಕಲ್ಪಿತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಶಾಸಕರ ಅಭಿಯಾನಕ್ಕೆ ಬ್ರೇಕ್!
ಕಾಟು ಮಾವಿನ ಮರಗಳನ್ನು ರಕ್ಷಣೆ ಮಾಡಬೇಕು ಮತ್ತು ಹೆಚ್ಚು ಮಾಡಬೇಕೆಂಬ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಈ ಬಾರಿ ಯಾವ ಮಾವಿನ ಮರದಿಂದಲೂ ಮಾವಿನ ಮಿಡಿಯನ್ನು ಕೊಯ್ಯುವುದಕ್ಕೆ ಬಿಟ್ಟಿಲ್ಲ. ಆದರೆ ಈಗ ಕಲ್ಪಿತ ಕಾರ್ಯಾಚರಣೆ ಹೆಸರಿನಲ್ಲಿ ಮರವನ್ನೇ ಕಡಿದು ಹಾಕಿ ಶಾಸಕರ ಅಭಿಯಾನಕ್ಕೇ ಬ್ರೇಕ್ ಹಾಕುವಂತಾಗಿದೆ.

ಬೊಳುವಾರಿನ ಮಾವಿನ ಮರ ಅಪಾಯಕಾರಿಯಾಗಿರುವ ಬಗ್ಗೆ ಹಲವು ದೂರು ಬಂದಿದ್ದು, ಉತ್ತಮವಾಗಿದೆ ಎಂದು ಅದನ್ನು ಬಿಡಲಾಗಿತ್ತು. ಈಗ ಪರಿಶೀಲಿಸುವ ಸಂದರ್ಭ ಗೆಲ್ಲು ತುಂಡಾದ ಜಾಗದಲ್ಲಿ ಠೊಳ್ಳಾಗಿರುವುದು ಪತ್ತೆಯಾಗಿದೆ. ಮರ ವರ್ಗಾವಣೆಗೆ ಹಲವು ಕೆಲಸ ಕಾರ್ಯಗಳಿರುವ ಕಾರಣಕ್ಕೆ ಅದನ್ನು ಕಡಿಯಲಾಗಿದೆ.
| ಕಿರಣ್
ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net