

ಮೈಸೂರು: ಮೈಸೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕಾಲಿಕ ಅಥವಾ ಅತಿಯಾದ ಮಳೆಯಿಂದಾಗಿ ಪ್ರವಾಹ, ಮನೆ ಹಾನಿ, ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ಸಮಸ್ಯೆಗಳು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗುವುದು, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳುವುದು ಇನ್ನು ಮುಂತಾದ ಹಲವಾರು ಪ್ರಾಕೃತಿಕ ವಿಕೋಪದ ಸಮಸ್ಯೆಗಳು ಉಂಟಾಗುವ ಸಂಭವವಿದ್ದು, ತಮ್ಮ ಬಡಾವಣೆಗಳ ವ್ಯಾಪ್ತಿಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅಧಿಕಾರಿ ಅಥವಾ ಸಿಬ್ಬಂದಿಗಳನ್ನು ಸಹಾಯವಾಣಿ ಮೂಲಕ ಸಂಪರ್ಕಿಸಿ ತಮ್ಮ ಮಳೆ ಹಾನಿ ಸಂಬoಧಿತ ಅಹವಾಲುಗಳನ್ನು ಸಲ್ಲಿಸಿ ಸೂಕ್ತ ಪರಿಹಾರಗಳನ್ನು ಪಡೆದುಕೊಳ್ಳಲು ತಿಳಿಸಿದ್ದಾರೆ.
ನಂಜನಗೂಡು ನಗರಸಭೆಯ ಪೌರಾಯುಕ್ತರಾದ ಎಸ್. ನಂಜುoಡಸ್ವಾಮಿ ಅವರ ದೂ.ಸಂ. 9844532502, ಹುಣಸೂರು ನಗರಸಭೆಯ ಪೌರಾಯುಕ್ತರಾದ ಶರ್ಮಿಳಾ ಅವರ ದೂ.ಸಂ. 7022773424, ಹೂಟಗಳ್ಳಿ ನಗರಸಭೆಯ ಪೌರಾಯುಕ್ತರಾದ ಬಿ.ಎನ್ ಚಂದ್ರಶೇಖರ್ ಅವರ ದೂ.ಸಂ.9880531555, ಕೆ.ಆರ್.ನಗರ ಪುರಸಭೆಯ ಪೌರಾಯುಕ್ತರಾದ ಹೇಮಂತ್ ಎಸ್ ಡೊಳ್ಳೆ ಅವರ ದೂ.ಸಂ. 9449987940, ಬನ್ನೂರು ಪುರಸಭೆಯ ಪೌರಾಯುಕ್ತರಾದ ಹೇಮಂತರಾಜು ಅವರ ದೂ.ಸಂ.9448433142, ತಿ.ನರಸೀಪುರ ಪುರಸಭೆಯ ಪೌರಾಯುಕ್ತರಾದ ಬಿ.ಕೆ.ವಸಂತಕುಮಾರಿ ಅವರ ದೂ.ಸಂ. 6360281580, ಪಿರಿಯಾಪಟ್ಟಣ ಪುರಸಭೆಯ ಪೌರಾಯುಕ್ತರಾದ ಕೆ.ಯು.ಮುತ್ತಪ್ಪ ಅವರ ದೂ.ಸಂ. 9902880630, ಹೆಚ್.ಡಿ.ಕೋಟೆ ಪುರಸಭೆಯ ಪೌರಾಯುಕ್ತರಾದ ಸುರೇಶ್ ಪಿ ಅವರ ದೂ.ಸಂ.8884953484,ಸರಗೂರು ಪಟ್ಟಣ ಪಂಚಾಯಿತಿಯ ಪೌರಾಯುಕ್ತರಾದ ಮಂಜುನಾಥ್ ಎಸ್ ಎಸ್ ಅವರ ದೂ.ಸಂ.9844158823, ಬೋಗಾದಿ ಪಟ್ಟಣ ಪಂಚಾಯಿತಿಯ ಪೌರಾಯುಕ್ತರಾದ ಕೊರಿಯಾಕೋಸ್ .ಸಿ ಅವರ ದೂ.ಸಂ. 9481653370, ಕಡಕೊಳ ಪಟ್ಟಣ ಪಂಚಾಯಿತಿಯ ಪೌರಾಯುಕ್ತರಾದ ನಾಗರತ್ನ ಎಂ.ಸಿ ಅವರ ದೂ.ಸಂ.9482058483, ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಪೌರಾಯುಕ್ತರಾದ ಸುರೇಶ್ ಎಂ .ಕೆ ಅವರ ದೂ.ಸಂ. 9481915838, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಪೌರಾಯುಕ್ತರಾದ ನರಸಿಂಹಮೂರ್ತಿ ಎಸ್.ಡಿ. ಅವರ ದೂ.ಸಂ. 9964647243 ಅನ್ನು ಸಂಪರ್ಕಿಸಿ ಸಮಸ್ಯೆಗಳ ಬಗ್ಗೆ ಅಹವಾಲು ನೀಡಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.