ರಾಷ್ಟ್ರಭಕ್ತರು ಅಜರಾಮರ

Ravi
Published on

ಚನ್ನಮ್ಮನ ಕಿತ್ತೂರು: ತಾನು ಮಾತ್ರ ಚೆನ್ನಾಗಿರಬೇಕೆಂದು ಬಯಸಿದ್ದರೆ ರಾಣಿ ಚನ್ನಮ್ಮಾಜಿ ಬ್ರಿಟಿಷರ ಜೊತೆ ಸಂಧಾನ ಮಾಡಿಕೊಳ್ಳಬಹುದಿತ್ತು. ಆದರೆ ಅವರು ಸ್ವಾಭಿಮಾನದ ಹೋರಾಟ ಮಾಡಿದರು ಎಂದು ವಿಧಾನ ಪರಿಷತ್​ ಸದಸ್ಯ ಸಿ.ಟಿ. ರವಿ ಹೇಳಿದರು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮಾಜಿಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು.

ಸಮಾಜದಲ್ಲಿ ರಾಷ್ಟ್ರಭಕ್ತರು ಇರುವಂತೆ ದ್ರೋಹಿಗಳು ಇರುತ್ತಾರೆ. ಆದರೆ ಒಳ್ಳೆಯ ಕಾರ್ಯ ಮಾಡಿದ ರಾಣಿ ಚನ್ನಮ್ಮಾಜಿ, ಸಂಗೊಳ್ಳಿ ರಾಯಣ್ಣ ಸೇರಿ ಅನೇಕ ಹೋರಾಟಗಾರರು ಅಜರಾಮವಾಗಿ ಉಳಿದಿದ್ದಾರೆ ಎಂದರು.

ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಕಾಂಗ್ರೆಸ್​ ಸರ್ಕಾರದಿಂದ ಎರಡು ವರ್ಷದಿಂದ ರಾಜ್ಯದಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ಏನಾದರೂ ಕೆಲಸ ಕೇಳಿದರೆ ಗ್ಯಾರೆಂಟಿಗೆ ಹಣ ಕೊಡುತ್ತಿದ್ದೇವೆ ಎನ್ನುವ ಮಾತು ಹೇಳುತ್ತಿದ್ದಾರೆ ಎಂದರು.

ಸುಭಾಷ್​ ಪಾಟೀಲ, ಸಂಜಯ ಪಾಟೀಲ, ಅರವಿಂದ ಪಾಟೀಲ, ಶ್ರೀಕರ ಕುಲಕರ್ಣಿ, ಲಕ್ಷಿ$್ಮ ಇನಾಮದಾರ, ಸಿ.ಎಸ್​. ಮೋಕಾಸಿ, ಬಸವರಾಜ ಮಾತನವರ, ಶಿವಾನಂದ ಹನುಮಸಾಗರ, ನಿಜಲಿಂಗಯ್ಯ ಹಿರೇಮಠ, ಕಿರಣ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net