

ದೊಡ್ಡಬಳ್ಳಾಪುರ: ಅಸ್ಸಾಂನ ಗುಹಾವಾಟಿಯಲ್ಲಿ ನ.23 ರಿಂದ ನಡೆಯಲಿರುವ ಕಿರಿಯರ 48ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ತಾಲೂಕಿನ ನಿಸರ್ಗಾ ಯೋಗ ಕೇಂದ್ರದ ಯೋಗಪಟುಗಳಾದ ಖುಷಿ, ಎನ್.ಪ್ರಿಯಾ, ಎಸ್.ಹವಿಷಾ, ಪ್ರಥಮ್ ಶೆಟ್ಟಿ, ಎಲ್.ನೀರಜ್, ಎ.ಹಿತೇಶ್, ಕೆ.ಎಂ.ಹಿತಶ್ರೀ, ಆರ್.ರೇನಿತಾ, ಎಚ್.ಆರ್.ಗೌತಮಿ, ಡಿ.ಎಸ್.ಮಧುಶಾಲಿನಿ, ಎಂ.ಆರ್.ಜಾನವಿ, ಎಲ್.ಸಿಂಧೂ ಆಯ್ಕೆಯಾಗಿದ್ದಾರೆ.
ರಾಜ್ಯ ಅಮೆಚ್ಯೂರ್ ಯೋಗಾಸನ ಸ್ಫೋಟ್ಸ್ ಅಸೋಸಿಯೇಷನ್, ಸಪ್ತರ್ಷಿ ಯೋಗಾಧಾರ ಸ್ಫೋಟ್ಸ್ ಅಕಾಡೆಮಿ ಹಾಗೂ ದಾವಣಗೆರೆ ಜಿಲ್ಲಾ ಯೋಗಾಸನ ಸ್ಫೋಟ್ಸ್‌ನಿಂದ ಇತ್ತೀಚೆಗೆ ಹರಿಹರದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ರಾಷ್ಟ್ರೀಯ ಸ್ಪರ್ಧೆಗೆ ತರಬೇತಿ ಪಡೆದಿದ್ದಾರೆ ಎಂದು ನಿಸರ್ಗಾ ಯೋಗ ಕೇಂದ್ರ ಕಾರ್ಯದರ್ಶಿ ಎ.ನಟರಾಜ್ ತಿಳಿಸಿದ್ದಾರೆ.