ಶಿಕ್ಷಣ ಕಲಿಕೆ ವಿಧಾನ ರಾಷ್ಟ್ರೀಯ ಕಾರ್ಯಾಗಾರ

Pharmacy college
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಕೆಎಲ್​ಇ ಸಂಸ್ಥೆಯ ಔಷಧ ವಿಜ್ಞಾನ ಮಹಾವಿದ್ಯಾಲಯ, ವಿಶ್ವವಿದ್ಯಾಲಯದ ವೃತ್ತಿಪರ ಶಿಕ್ಷಣ ಮತ್ತು ಆರೋಗ್ಯ ವಿಭಾಗ ಮತ್ತು ಫಾರ್ಮಕಾಲಜಿ ವಿಭಾಗದ ಸಹಯೋಗದಲ್ಲಿ ಪ್ರಶ್ನೆ ಆಧಾರಿತ ಕಲಿಕೆಯಲ್ಲಿ ವಿದ್ಯಾರ್ಥಿಗಳ ಕೇಂದ್ರಿತ ಶಿಕ್ಷಣ ಕಲಿಕೆಯ ವಿಧಾನ ಎಂಬ ವಿಷಯದ ಕುರಿತು ರಾಷ್ಟ್ರೀಯ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯ ಡಾ.ಎಚ್.ವಿ.ಬೆಳಗಲಿ ಉದ್ಘಾಟಿಸಿ ಪ್ರಶ್ನೆ ಆಧಾರಿತ ಕಲಿಕೆಯ ಮತ್ತು ಶೈಕ್ಷಣಿಕ ಸಂಶೋಧನೆಯ ವಿವಿಧ ಆಯಾಮಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ. ಎಚ್. ಎಂ. ವಿಶ್ವನಾಥಸ್ವಾಮಿ ಪ್ರಶ್ನೆ ಆಧಾರಿತ ಕಲಿಕೆಯಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕಲಿಕೆಯ ವಿಧಾನದ ಉಪಯೋಗ ಮತ್ತು ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ವಿನಾಯಕ ಕುಲಕರ್ಣಿ, ಡಾ.ನಾಗರಾಜ ಏಕಬೋಟೆ, ಡಾ.ಪ್ರಕಾಶ ಹೆಗಡೆ, ಕೆಎಲ್​ಇ ಸಂಸ್ಥೆಯ ಔಷಧ ವಿಜ್ಞಾನ ಕಾಲೇಜಿನ ಡಾ.ಲಕ್ಷ್ಮೀ ಪಟ್ಟಣಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಲಿಕೆಯ ವಿಧಾನದ ವಿವಿಧ ಆಯಾಮಗಳ ಬಗ್ಗೆ ಉಪನ್ಯಾಸ ನೀಡಿದರು. 50ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಸಂಯೋಜಕರಾಗಿ ಡಾ. ನೀಲಕಂಠ ಜಡಿ ಕಾರ್ಯನಿರ್ವಹಿಸಿದರು. ಡಾ.ಎಸ್.ಕೆ. ನಿಂಬಾಳ, ಡಾ.ಸಂತೋಷ ಪಾಟೀಲ, ನೇಹಾ ಮಾಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net