

ಹುಬ್ಬಳ್ಳಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹು-ಧಾ ಮಹಾನಗರ ಪಾಲಿಕೆ ಮತ್ತು ತಾಲೂಕು ಆಡಳಿತ ವತಿಯಿಂದ ಇಲ್ಲಿಯ ಪಾಲಿಕೆ ಸಭಾ ಭವನದಲ್ಲಿ ಶನಿವಾರ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು.
ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಯಮನಪ್ಪ ಕರೇಹನುಮಂತಪ್ಪ ಉದ್ಘಾಟಿಸಿದರು. ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ, ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಬಿ.ಎಫ್. ಜಿಡ್ಡಿ, ಡಾ. ಆನಂದ ಕಲ್ಲೋಳಿಕರ, ಸಂಪನ್ಮೂಲ ವ್ಯಕ್ತಿ ಎಸ್.ಕೆ. ಮುಲ್ಲಾ, ಶಿಕ್ಷಣ ಸಂಯೋಜಕಿ ವನಿತಾ ಆರ್. ಇತರರು ಇದ್ದರು.