ರಾಷ್ಟ್ರೀಯ ರಂಗ ಉತ್ಸವ

Drama-games
Published on

ಮೈಸೂರು: ಅಭಿಯಂತರರು ಸಂಸ್ಥೆಯ 31ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ರಂಗ ಉತ್ಸವದಲ್ಲಿ ಮಾ.1ರಂದು ಸಂಜೆ 7ಕ್ಕೆ ಬೆಂಗಳೂರಿನ ಧೀಮಹಿ ಸೆಂಟರ್ ಆಫ್ ಆರ್ಟ್ಸ್ ತಂಡದಿಂದ ‘ನಂ.36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.


ಮಾ.2ರಂದು ಸಂಜೆ 7ಕ್ಕೆ ಬೆಂಗಳೂರಿನ ಆಕ್ಟ್ ರಿಯಾಕ್ಟ್ ತಂಡದಿಂದ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಕನ್ನಡ ನಾಟಕ, ಫೆ.3ರಂದು ಸಂಜೆ 7ಕ್ಕೆ ಮುಂಬೈನ ಅಭಿನಯ ಕಲ್ಯಾಣ್ ತಂಡದಿಂದ ‘ಕಾಕಶಿ’ ಹಿಂದಿ ನಾಟಕ ಪ್ರದರ್ಶನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net