

ಮಂಡ್ಯ: ಅಂದಿನ ಗುರುಕುಲದಿಂದ ಈಗಿನ ಆಧುನಿಕ ಶಿಕ್ಷಣ ಪದ್ಧತಿವರೆಗೂ ಶಿಕ್ಷಕರ ಮಹತ್ವ ಕಡಿಮೆಯಾಗಿಲ್ಲ ಎಂದು ಅಸೋಷಿಯೇಷನ್ ಆ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ನಗರದಲ್ಲಿರುವ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲಾ ಸಭಾಂಗಣದಲ್ಲಿ ಅಸೋಷಿಯೇಷನ್ ಆ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್, ಕೃಷಿಕ ಅಲಯನ್ಸ್, ಸನ್ಮತಿ ಅಲಯನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಮತ್ತು ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಶಿಕ್ಷಕರ ಮಹತ್ವ ಕಡಿಮೆಯಾಗುತ್ತಿದೆ ಎಂದು ಬಹಳಷ್ಟು ಜನರು ಹೇಳುತ್ತಾರೆ, ಅದು ಸುಳ್ಳು. ಶೈಕ್ಷಣಿಕ ಕ್ಷೇತ್ರದಲ್ಲಿ ಗುರು ಪರಂಪರೆ ಪಾತ್ರ ದೊಡ್ಡದು. ಗುರು-ಶಿಷ್ಯರ ಒಡನಾಟಕ್ಕೆ ಶ್ರದ್ಧಾಭಕ್ತಿಯ ಭಾವನೆಯಿದೆ ಎಂದು ನುಡಿದರು.
ಇಡಿ ಜಗತ್ತಿನಲ್ಲಿ ಒಳ್ಳೊಳ್ಳೆಯ ವಿಜ್ಞಾನಿ, ವೈದ್ಯರು, ಇಂಜಿನಿಯರ್, ಅಧಿಕಾರಿಗಳ ವರ್ಗಗಳನ್ನು ತಯಾರು ಮಾಡುವಂತವರೇ ಶಿಕ್ಷಕರು. ಅಂತಹ ಶಿಕ್ಷಕರಿಗೆ ಮಹತ್ವ ಹೆಚ್ಚುತ್ತಲೇ ಇರುತ್ತವೆ. ಸಮಾಜ ಮತ್ತು ಶಿಷ್ಯಕೋಟಿ ನಮನ ಸಲ್ಲಿಸುತ್ತದೆ. ಪ್ರತಿದಿನ ಸಕಲ ಜೀವ-ಸಂಪತ್ತು ಮತ್ತು ಸಾಧಕರ ಸ್ಮರಿಸಲು ಅಂತಾರಾಷ್ಟ್ರೀಯ-ರಾಷ್ಟ್ರೀಯ ದಿನ ನಿಗದಿಯಾಗಿವೆ. ಇಂತಹ ಆಚರಣೆಯಲ್ಲಿ ಶಿಕ್ಷಕರ ದಿನವೂ ಮುಖ್ಯ ಎಂದರು.
ಡಿಡಿಪಿಐ ಶಿವರಾಮೇಗೌಡ, ದಕ್ಷಿಣ ವಲಯ ಬಿಇಒ ಮಹದೇವು, ವಿಜ್ಞಾನ ವಿಷಯ ನಿವೃತ್ತ ಪರೀಕ್ಷಕ ಸಿ.ಎಲ್.ನಂಜರಾಜ್, ಕಾರ್ಮೆಲ್ ಕಾನ್ವೆಂಟ್ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಸಿಸ್ಟರ್ ಕ್ಲಾಡೀಸ್ ಕ್ಯಾಸ್ಟಲ್ಲಿನೊ, ಮಿಮ್ಸ್ ನಿವೃತ್ತ ಪಿಆರ್‌ಒ ಉಮೇಶ್, ಅಲಯನ್ಸ್ ಸಂಸ್ಥೆಯ ಅಧ್ಯಕ್ಷೆ ವಿ.ಮಹಾಲಕ್ಷ್ಮೀ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಮಂಜುನಾಥ್, ಸನ್ಮತಿ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಎಂ.ಸುಜಾತಾ, ಷುಗರ್ ಸಿಟಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಎಂ.ಲೋಕೇಶ್, ಕಾಂಟ್ರಾಕ್ಟರ್ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ ಇತರರಿದ್ದರು.
ಇದೇ ವೇಳೆ ಮಿಮ್ಸ್ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಎಸ್.ಶಿಲ್ಪಾ, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಎಚ್.ಸಿ.ಚೌಡೇಗೌಡ, ಸಹಾಯಕ ಪ್ರಾಧ್ಯಾಪಕ ಡಾ.ಬಿ.ವಿ.ನರಸಿಂಹನ್, ಮಾಂಡವ್ಯ ಕಾಲೇಜಿನ ಉಪನ್ಯಾಸಕ ಎಂ.ಆರ್.ಮಂಜು, ಕಾರ್ಮೆಲ್ ಕಾಲೇಜಿನ ಉಪನ್ಯಾಸಕಿ ಆರ್.ಮಹೇಶ್ವರಿ, ಕೊಪ್ಪ ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಚ್.ಎಂ.ಸಿದ್ದರಾಜು, ಕಾರ್ಮೆಲ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಮೇರಿ ಪೌಲಿನ್ ಮತ್ತು ಕಾನ್ವೆಂಟ್‌ನ ಶಿಕ್ಷಕಿ ಕೆ.ಮೈತ್ರಾ ದೇವಿ, ಸೆಂಟ್‌ಆನ್ಸ್ ಶಾಲೆಯ ಶಿಕ್ಷಕ ಎಸ್.ಸುರೇಂದ್ರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಆರ್.ಅನಿತಾ, ವಿ.ಸಿ ಾರ್ಮ್ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಿ.ಸಿ.ಕಾಸಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.