ಆಕಾಶ್​ನಿಂದ ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆ

Published on

ಹುಬ್ಬಳ್ಳಿ: ಆಕಾಶ್ ಎಜ್ಯುಕೇಶನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್​ಎಲ್) ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಯು (ಅಂಥೆ) ಅ. 4 ರಿಂದ 12ರ ವರೆಗೆ ಆನ್​ಲೈನ್ ಮತ್ತು ಆಫ್​ಲೈನ್ ಮೂಲಕ ನಡೆಯಲಿದೆ ಎಂದು ಸಂಸ್ಥೆಯ ಸಹಾಯಕ ನಿರ್ದೇಶಕ ಡಿ.ರವಿಕುಮಾರ್ ತಿಳಿಸಿದರು.

ನಗರದ ಆಕಾಶ್ ಶಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 4 ರಿಂದ 12 ರವರೆಗೆ ವಿದ್ಯಾರ್ಥಿಗಳು ಒಂದು ಗಂಟೆಯ ಸ್ಲಾಟ್ ಅನ್ನು ಆಯ್ಕೆ ಮಾಡುವ ಮೂಲಕ ತಮ್ಮ ಅನುಕೂಲಕ್ಕೆ ತಕ್ಕಂತೆ ಆನ್​ಲೈನ್ ಪರೀಕ್ಷೆ ತೆಗೆದುಕೊಳ್ಳಬಹುದು. ಆಫ್​ಲೈನ್ ಪರೀಕ್ಷೆಯನ್ನು ಅ.5 ಮತ್ತು 12 ರಂದು ದೇಶದ ವಿವಿಧೆಡೆಯ 415ಕ್ಕೂ ಹೆಚ್ಚು ಆಕಾಶ್ ಕೇಂದ್ರಗಳಲ್ಲಿ ನಡೆಸಲಾಗುವುದು. ಈಗಾಗಲೇ ನೋಂದಣಿ ಆರಂಭಗೊಂಡಿದೆ ಎಂದರು

5ರಿಂದ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಈ ಪರೀಕ್ಷೆಯಲ್ಲಿ ಮೊದಲ 1000 ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಜೆಇಇ ಅಡ್ವಾನ್ಸಡ್ ಪರೀಕ್ಷೆಗಾಗಿ ಉಚಿತ ತರಬೇತಿ ನೀಡಲು 250 ಕೋಟಿ ವಿದ್ಯಾರ್ಥಿವೇತನ ಮೀಸಲಿಡಲಾಗಿದೆ. ಪ್ರವೇಶ ಪಡೆಯದಿದ್ದಲ್ಲಿ 2.5 ಕೋಟಿ ನಗದು ಬಹುಮಾನ ವಿತರಿಸಲಾಗುವುದು. ಯಾವುದೇ ಉನ್ನತ ಆರ್ಥಿಕ, ಸಾಮಾಜಿಕ ಹಿನ್ನೆಲೆ ಇಲ್ಲದ ಪ್ರತಿಭಾವಂತರೂ ಅತ್ಯುತ್ತಮ ತರಬೇತಿ ಪಡೆಯಲು ಈ ಪರೀಕ್ಷೆ ನೆರವಾಗುತ್ತದೆ. ನಮ್ಮಲ್ಲಿ ಪ್ರವೇಶ ಪಡೆದ ಬಳಿಕ ಆಫ್​ಲೈನ್ ಮತ್ತು ಆನ್​ಲೈನ್ ಎರಡೂ ಮಾದರಿಯ ಬೆಂಬಲ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರಾದೇಶಿಕ ಮಾರುಕಟ್ಟೆ ಮುಖ್ಯಸ್ಥ ಅನಿಲ್​ಕುಮಾರ ಎಚ್.ಆರ್., ವಲಯ ಕಚೇರಿ ಹಿರಿಯ ವ್ಯವಸ್ಥಾಪಕ ಅಮೀರ ಹುಸೇನ್, ಶಾಖಾ ಮುಖ್ಯಸ್ಥ ಜುನೈದ್ ಉಜ್ಜಮಾನ್, ಅಕಾಡೆಮಿಕ್ ಮುಖ್ಯಸ್ಥ ವಿ. ಲಿಂಗಾರೆಡ್ಡಿ, ಟಿ. ವೆಂಕಟೇಶ್ವರಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net